Job Description: ನವದೆಹಲಿ: ವಿಯೆಟ್ನಾಮ್ ರಾಷ್ಟ್ರವು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನೂ ಖರೀದಿಸಲು ಆಸಕ್ತಿತೋರಿದೆ. ಬ್ರಹ್ಮೋಸ್ ಕ್ಷಿಪಣಿಗಳನ್ನೂ ಭಾರತ ಮತ್ತು ರಷ್ಯಾ ರಾಷ್ಟ್ರಗಳು ಜಂಟಿಯಾಗಿ ತಯಾರಿಸಿದ್ದು, ಚೀನಾದ ವೈರಿ ವಿಯೆಟ್ನಾಮ್ಗೆ ಬ್ರಹ್ಮೋಸ್ ಕ್ಷಿಪಣಿ ನೀಡಲು ರಷ್ಯಾ ವಿರೋಧಿಸಿತ್ತು, ಆದರೆ ಸದ್ಯ ರಷ್ಯಾ ಕ್ಷಿಪಣಿ ಮಾರಾಟಕ್ಕೆ ಒಪ್ಪಿಗೆ ನೀಡಿದ್ದು, ವಿಯೆಟ್ನಾಮ್ ಬ್ರಹ್ಮೋಸ್ ಮತ್ತು ಆಕಾಶ್ ಕ್ರೂಸ್ ಮಿಸೈಲ್ಗಳ ಖರೀದಿಸಲು ಮುಂದಾಗಿದೆ. ಈ ಕ್ಷಿಪಣಿಗಳನ್ನು ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ನಿಯೋಜಿಸಲು ವಿಯೆಟ್ನಾಮ್ ಪ್ಲಾನ್ ಮಾಡಿಕೊಂಡಿದೆ. * ಬ್ರೆಜಿಲ್, ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಅಲ್ಜೀರಿಯಾ, ಗ್ರೀಸ್, ದಕ್ಷಿಣ ಆಫ್ರಿಕಾ, ಮಲೇಷ್ಯಾ, ಥೈಲ್ಯಾಂಡ್, ಈಜಿಪ್ಟ್, ಸಿಂಗಾಪುರ್, ಬುಲ್ಗೇರಿಯಾ ಸೇರಿ ಹಲವು ರಾಷ್ಟ್ರಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಮುಂದಾಗಿರುವುದು ವಿಶೇಷ.