Job Description: ರಷ್ಯಾ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಬಾಂಬ್ ಸ್ಫೋಟಿಸುವ 40 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಇತ್ತೀಚಿಗೆ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಶತ್ರು ರಾಷ್ಟ್ರಗಳಿಗೆ ತನ್ನ ಸಾಮಥ್ರ್ಯದ ಪರಿಚಯ ಮಾಡಿಸಿದೆ. ಈ ಬಾಂಬ್ ಅನ್ನು ತ್ಸಾರ್ ಬಾಂಬ್ ಎಂದು ಕರೆಯಲಾಗಿದೆ. ಈ ಬಾಂಬ್ ಹಿರೋಷಿಮಾ ನಾಗಸಾಕಿ ಮೇಲೆ ಹಾಕಲಾದ ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ ಗಿಂತ 3,333 ಪಟ್ಟು ಹೆಚ್ಚು ವಿನಾಶಕಾರಿ ಎಂದು ತಿಳಿದುಬಂದಿದ್ದು, ಈ ಬಾಂಬ್ ಒಟ್ಟು 26 ಅಡಿ ಉದ್ದ ಹಾಗೂ 27 ಟನ್ ನಷ್ಟು ಭಾರವಿತ್ತು. USSR ಮತ್ತು USA ನಡುವಿನ ದೀರ್ಘಕಾಲದ ಪರಮಾಣು ಓಟದ ಉತ್ಪನ್ನವೆಂದರೆ ತ್ಸಾರ್.