Job Description: ತಮ್ಮ ಪ್ರತ್ಯೇಕೆಯಿಂದ ಲಡಾಖ್ ಮತ್ತು ಲೇಹ್ ಪ್ರದೇಶಗಳು ಕೇವಲ 5 ಗಂಟೆಗಳ ವಿದ್ಯುತ್ ಸರಬರಾಜನ್ನು ಡೀಸೆಲ್ ಎಂಜಿನ್ ಮತ್ತು ಕೆಲ ಮೈಕ್ರೋ ಹೈಡಲ್ ಯೋಜನೆಯಿಂದ ಪಡೆಯುತ್ತಿದ್ದವು. ಇದೀಗ ಭಾರತ ಸರ್ಕಾರವು ಈ ಪ್ರದೇಶಗಳನ್ನು ರಾಷ್ಟ್ರೀಯ ವಿದ್ಯುತ್ ಗ್ರಿಡ್ನೊಂದಿಗೆ ಜೋಡಿಸಲು ಸುಮಾರು 1,200 ಕೋಟಿ ರೂ. ಮೊತ್ತದ ಗ್ರಾಮೀಣ ವಿದ್ಯುದ್ದೀಕರಣ ನಿಗಮವು ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ನ್ಯಾಷನಲ್ ಪವರ್ ಗ್ರಿಡ್: ನ್ಯಾಷನಲ್ ಪವರ್ ಗ್ರಿಡ್ ಇದು ಒಂದು 307.8 GW ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಗ್ರಿಡ್ ವಿಶ್ವದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ವಿದ್ಯುತ್ ಗ್ರಿಡ್ಗಳಲ್ಲಿ ಒಂದಾಗಿದೆ. ಅಲ್ಲದೆ, ದೇಶಾದ್ಯಂತ ಹಲವು ವಿದ್ಯುತ್ ಕೇಂದ್ರಗಳು ಮತ್ತು ಪ್ರಮುಖ ಉಪ ಕೇಂದ್ರಗಳ ಸಂಪರ್ಕಿಸುವ ಜಾಲವನ್ನು ಇದು ಹೊಂದಿದೆ. ಇದನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುತ್ತದೆ.