Job Description: ಇತ್ತೀಚಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (NGT) "ಪರಿಶುದ್ಧ ಗಾಳಿ ಪಡೆಯುವದು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದರೆ ಜನರ ಬದುಕುವ ಮೂಲಭೂತ ಹಕ್ಕನ್ನು ಸರ್ಕಾರ ನಿರಾಕರಿಸಿದಂತೆ" ಎಂದು ಅಭಿಪ್ರಾಯಪಟ್ಟಿದೆ. ಶುದ್ಧ ಗಾಳಿ, ನೀರು ಮತ್ತು ಸ್ವಚ್ಛಂದ ವಾತಾವರಣ ಮುಂತಾದವು ಪಡೆಯುವದು ಜನರ ಸಂವಿಧಾನಬಧ್ಧ ಹಕ್ಕಾಗಿದ್ದು, ಅದನ್ನು ರಕ್ಷಿಸುವುದು ಸರ್ಕಾರದ ಕೆಲಸ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿಳಿಸಿದೆ.