Job Description: ಬೆಂಗಳೂರು: ಇದೆ ಸೆಪ್ಟೆಂಬರ್ 05 ಶಿಕ್ಷಕರ ದಿನದ ವಿಶೇಷತೆಗಾಗಿ ಭಾರತೀಯ ಅಂಚೆ ಇಲಾಖೆಯು ಶಿಕ್ಷಕರಿಗೆ ಅಂಚೆ ಮೂಲಕ ಉಡುಗೊರೆಗಳನ್ನು ನೀಡುವ ವಿಶೇಷ 'ಗುರುವಂದನೆ ಯೋಜನೆ' ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ತಮ್ಮ ಆತ್ಮೀಯ ಗುರುಗಳಿಗೆ ಆಕರ್ಷಕ ಖಾದಿ ಮಾಸ್ಕ್ಗಳು, ತುದಿಯಲ್ಲಿ ಹೂವು ಅಥವಾ ಹಣ್ಣಿನ ಗಿಡದ ಬೀಜವನ್ನು ಹೊಂದಿದ ಸೀಡ್ ಪೆನ್ಸಿಲ್ ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ ತಮ್ಮ ಗುರುಗಳಿಗೆ ಶುಭಾಶಯ ತಿಳಿಸಬಹುದು. ಪ್ರತಿ ಉಡುಗೊರೆಗೆ ₹100 ದರ ನಿಗದಿಪಡಿಸಲಾಗಿದೆ. ಈ ಸೇವೆಯು ಸೆ.1 ರವರೆಗೆ ಇರುತ್ತದೆ. ಅಂಚೆ ಇಲಾಖೆಯ ವೆಬ್ ಸೈಟ್ https://karnatakapost.gov.in/Guru_Vandana/Register.aspx ಕ್ಲಿಕ್ ಮಾಡಬೇಕು.