Job Description: ನವದೆಹಲಿ: 2019-20 ನೇ ಸಾಲಿನಲ್ಲಿ ದೇಶದಲ್ಲಿ ಖೋಟಾನೋಟುಗಳ ಪ್ರಕರಣ ಹೆಚ್ಚಿರುವ ಕುರಿತು ಭಾರತೀಯ ರಿಸರ್ವ ಬ್ಯಾಂಕ್ ವರದಿಮಾಡಿದೆ. ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಭಾರತದ ನೋಟುಗಳು ಹೊಂದಿದ್ದರೂ ಕೂಡ 200 ರೂ. ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಪತ್ತೆ ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕ ಕಳವಳ ವ್ಯಕ್ತಪಡಿಸಿದೆ. * 2019-20ರಲ್ಲಿ 500 ರೂ. ಸರಣಿಯ 30,054 ಖೋಟಾ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾಗಿವೆ, ಹಾಗೂ 31,969 ನಕಲಿ ನೋಟುಗಳು ಪತ್ತೆಯಾಗಿವೆ(151% ಹೆಚ್ಚಳ). * ಈ ವರದಿಯು ಕೇವಲ ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್ಗಳ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆ ಮಾಡಿದ ಖೋಟಾ ನೋಟಿನ ಪ್ರಮಾಣವಾಗಿದ್ದು, ಪೊಲೀಸ್ ಹಾಗೂ ಇತರ ಜಾರಿ ಇಲಾಖೆಗಳು ವಶಕ್ಕೆ ಪಡೆದ ಖೋಟಾ ನೋಟುಗಳ ಸಂಖ್ಯೆ ಈ ವರದಿಯಲ್ಲಿ ಸೇರಿಲ್ಲ. * ಕೇಂದ್ರ ಸರ್ಕಾರ ಖೋಟಾ ನೋಟುಗಳ ಹಾವಳಿ ತಡೆಯುವ ಮುಖ್ಯ ಉದ್ದೇಶದಿಂದ ನೋಟು ರದ್ದತಿ ತೀರ್ಮಾನ ಕೈಗೊಂಡಿತ್ತು, ಆದರೆ ನೋಟು ರದ್ದತಿಯ ಪ್ರಧಾನ ಉದ್ದೇಶವೇ ವಿಫಲವಾಗಿರುವುದು ಆರ್ಬಿಐ ವರದಿಯಿಂದ ತಿಳಿದುಬಂದಿದೆ.