Job Description: ರಾಜ್ಯಸಭೆಗೆ ಇತ್ತೀಚಿಗೆ ಹಣಕಾಸು ಸಚಿವಾಲಯ ನೀಡಿದ ಅಂಕಿಅಂಶಗಳ ವರದಿ ಪ್ರಕಾರ, ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದ ಮಹಿಳೆಯರ ಪೈಕಿ ತಮಿಳುನಾಡು ರಾಜ್ಯವು ಅಗ್ರಸ್ಥಾನ ಪಡೆದಿದೆ. ಹಾಗೂ ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಿವೆ. ಹಣಕಾಸು ಸಚಿವಾಲಯವು ತಯಾರಿಸಿದ ಅಂಕಿಅಂಶಗಳ ಪ್ರಕಾರ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಆರಂಭದಿಂದ ಇಲ್ಲಿಯವರೆಗೆ ಸುಮಾರು 4.78 ಲಕ್ಷ ಕೋಟಿ ರೂ ಮೊತ್ತದ 15 ಕೋಟಿ ಸಾಲಗಳನ್ನು ನೀಡಲಾಗಿದೆ. * ಮಾರ್ಚ್ 31, 2020 ರ ವೇಳೆಗೆ ತಮಿಳುನಾಡು 58,227 ಕೋಟಿ ರೂ. ಸಾಲ ಒದಗಿಸಿದೆ. ಇತರೆ ರಾಜ್ಯಗಳ ವಿವರ: - ಪಶ್ಚಿಮ ಬಂಗಾಳ: 55,232 ಕೋಟಿ ರೂ - ಕರ್ನಾಟಕ: 47,714 ಕೋಟಿ ರೂ - ಬಿಹಾರ: 44,879 ರೂ - ಮಹಾರಾಷ್ಟ್ರ: 42,000 ಕೋಟಿ ರೂ