Job Description: ವೆಸ್ಟ್ ಇಂಡೀಸ್ ನ ಹಿರಿಯ ಆಲ್ ರೌಂಡರ್ ಆಟಗಾರ ಬ್ರಾವೊ ಅವರು ಟಿ 20 ಆವೃತ್ತಿಯ ಕ್ರಿಕೆಟ್ ನಲ್ಲಿ ನೂತನ ದಾಖಲೆ ಬರೆದಿದ್ದು ಒಟ್ಟು 500 ವಿಕೇಟಗಳನ್ನು ಪಡೆದ ಮೊದಲ ಬೌಲರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸೈಂಟ್ ಲೂಸಿಯಾ ಜೂಕ್ಸ್ ವಿರುದ್ಧದ ಪಂದ್ಯದಲ್ಲಿ ರಖೀಂ ಕಾರ್ನ್ ವಲ್ ವಿಕೆಟ್ ಪಡೆಯುವ ಮೂಲಕ ಟ್ರಿನಿಡಾಡ್ ನೈಟ್ ರೈಡರ್ಸ್ ಬೌಲರ್ ಬ್ರಾವೋ 500 ವಿಕೆಟ್ ಪೂರ್ಣಗೊಳಿಸಿದರು. * ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಸಿತ್ ಮಲಿಂಗ 390 ವಿಕೆಟ್ ಪಡೆದಿದ್ದು, ಸುನೀಲ್ ನರೈನ್ ಅವರು 383 ವಿಕೆಟ್ ನೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ.