Job Description: ಭಾರತದ ISRO ಸಂಸ್ಥೆಯ ಚಂದ್ರನ ಕುರಿತ ಅಧ್ಯಯನದ ಎರಡನೇ ಯೋಜನೆಯಾದ ಚಂದ್ರಯಾನ-2 ಚಂದ್ರನ ಕಕ್ಷೆಯ ಸುತ್ತಲೂ ಓಡಾಟ ಆರಂಭಿಸಿ ಇದೆ ಆಗಸ್ಟ್ 20ಕ್ಕೆ ಯಶಸ್ವೀ ಒಂದು ವರ್ಷ ಪೂರೈಕೆಯಾಗಿದೆ. 2019ರ ಜುಲೈ 22ರಂದು ಉಡಾವಣೆಗೊಂಡಿದ್ದ ನೌಕೆ, ಆಗಸ್ಟ್ 20ರಂದು ಚಂದ್ರನ ಕಕ್ಷೆಯನ್ನು ಸೇರಿಕೊಂಡಿತ್ತು. ನಂತರ ಸೆ. 7ರಂದು ರೋವರ್ಅನ್ನು ಚಂದ್ರನ ಮೇಲೆ ನಿಧಾನವಾಗಿ ಇಳಿಸುವ ಪ್ರಯತ್ನ ವಿಫಲವಾಗಿತ್ತು, ಈ ಮೂಲಕ ಚಂದ್ರಯಾನ-2 ಯೋಜನೆಯು ಶೇಕಡಾ 90 ರಷ್ಟು ಯಶಸ್ಸು ಸಾಧಿಸಿತ್ತು, ಪ್ರಸ್ತುತ ಒಂದು ವರ್ಷದ ಸುತ್ತಾಟ ಪೂರ್ಣಗೊಳಿಸಿರುವ ನೌಕೆಯು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಏಳು ವರ್ಷಗಳ ಅವಧಿಯವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ತಿಳಿಸಿದೆ.