Job Description: ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಹೊಸ ರೂಪ ಮತ್ತು ಪಾರದರ್ಶಕತೆ ತರುವ ಸಲುವಾಗಿ ಭಾರತ ಸರ್ಕಾರವು ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA) ಸ್ಥಾಪಿಸಲು ತೀರ್ಮಾನಿಸಿದೆ. * ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಮತ್ತು ಸಿ ವೃಂದದ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರಲಿದೆ. * ರಾಷ್ಟ್ರೀಯ ನೇಮಕಾತಿ ಸಂಸ್ಥೆ ಮೂಲಕ ಈವರೆಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್(SSC), ರೈಲ್ವೆ ನೇಮಕಾತಿ ಮಂಡಳಿ(RRB) ಹಾಗೂ ಬ್ಯಾಂಕಿಂಗ್ ಸೇವಾ ಸಿಬ್ಬಂದಿ ಸಂಸ್ಥೆ (IBPS) ಈ ಮೂರು ನೇಮಕಾತಿ ಸಂಸ್ಥೆಗಳು ಬದಿಗೆ ಸರಿಯಲಿವೆ. * ರಾಷ್ಟ್ರೀಯ ನೇಮಕಾತಿ ಸಂಸ್ಥೆಗೆ ರಚನೆಗೆ ಬಳಸಿಕೊಳ್ಳಲು 1517.57 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.