Job Description: ಮೈಸೂರು: ದೇಶದ ಸ್ವಚ್ಛ ಸರ್ವೆಕ್ಷಣ್ ಸಮೀಕ್ಷೆ-2020 ನ್ನು ಪ್ರಧಾನಿ ಮೋದಿಯವರು ಬಿಡುಗಡೆಗೊಳಿಸಿದ್ದು, ಈ ಅಭಿಯಾನದಲ್ಲಿ ಮೈಸೂರು 5, ತುಮಕೂರು 72 ಹಾಗೂ ಬೆಂಗಳೂರು 214ನೇ ಸ್ಥಾನ ಗಳಿಸಿವೆ. ಪ್ರಮುಖಾಂಶಗಳು: * ಬೆಂಗಳೂರು ದೇಶದ ಅತ್ಯುತ್ತಮ ಸ್ವಯಂ ಸುಸ್ಥಿರ ಅಭಿವೃದ್ಧಿ ನಗರ ಗರಿಯನ್ನು ಮುಡಿಗೇರಿಸಿಕೊಂಡಿದೆ. * ದೇಶದ 27 ರಾಜ್ಯಗಳಲ್ಲಿ ಸ್ವಚ್ಛತೆಯಲ್ಲಿ ಕರ್ನಾಟಕ 21ನೇ ಸ್ಥಾನ ಗಳಿಸಿದೆ. * 2020ರ ಸರ್ವೆಕ್ಷಣೆಯಲ್ಲಿ ಇಂದೋರ್ ಪ್ರಥಮ, ಸೂರತ್ ದ್ವಿತೀಯ, ನವ ಮುಂಬೈ ತೃತೀಯ ಸ್ಥಾನ ಗಳಿಸಿವೆ. * ಮೈಸೂರು 3 ರಿಂದ 10 ಲಕ್ಷದೊಳಗಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ 5,298 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. * ದೇಶದ ದಕ್ಷಿಣ ವಲಯದ ರಾಜ್ಯಗಳ 25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಪಿರಿಯಾಪಟ್ಟಣ ಸ್ವಚ್ಛತಾ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. * ದೇಶದ ಅತ್ಯುತ್ತಮ 'ಸ್ವಯಂ ಸುಸ್ಥಿರ ನಗರ' ಎಂಬ ಪ್ರಶಸ್ತಿಗೆ ಬೆಂಗಳೂರು ನಗರ ಭಾಜನವಾಗಿದೆ. * ದಕ್ಷಿಣ ವಲಯದ 50 ರಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ರಾಮನಗರ ಇನ್ನೋವೇಷನ್ ಆಂಡ್ ಬೆಸ್ಟ್ ಪ್ರ್ಯಾಕ್ಟಿಸಸ್ ಗೌರವಕ್ಕೆ ಭಾಜನವಾಗಿದೆ.