Job Description: ಕಠ್ಮಂಡು: ಭಾರತದ ನೆರವಿನೊಂದಿಗೆ ನೇಪಾಳದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಇತ್ತೀಚಿಗೆ ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ವರ್ಚುವಲ್ ಸಭೆಯ ಮೂಲಕ ಪರಾಮರ್ಶಿಸಿದರು. ಇತ್ತೀಚಿಗೆ ಭಾರತದ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ನೂತನ ನಕ್ಷೆ ಪ್ರಕಟಿಸಿತು. ಹಾಗೂ ನೇಪಾಳ ಪ್ರಧಾನಿಯವರು ಶ್ರೀರಾಮ ಹುಟ್ಟಿದ್ದು ನೇಪಾಳದಲ್ಲಿ ಎಂಬ ಹೇಳಿಕೆ ನೀಡಿದ್ದರು ಇದರಿಂದಾಗಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದೆ. ಈ ಬೆಳವಣಿಗೆ ನಂತರದಲ್ಲಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಪ್ರಥಮ ಸಭೆ ಇದೇ ಆಗಿದೆ. ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಹಾಗೂ ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಈ ಸಭೆಯಲ್ಲಿ ಆಯಾ ರಾಷ್ಟ್ರಗಳನ್ನು ಪ್ರತಿನಿಧಿಸಿದರು.