Job Description: ಕೋಲ್ಕತ್ತಾ: ಸಾಮಾನ್ಯವಾಗಿ ಬಸ್ಸುಗಳಲ್ಲಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ವಿಕಲ ಚೇತನರಿಗೆ ಸೇರಿ ವಿವಿಧ ಜನರಿಗೆ ಅಸಗಳನ್ನು ಮೀಸಲಿರುಸುವುದು ಸರ್ವೇ ಸಾಮಾನ್ಯ ಆದರೆ ಪಶ್ಚಿಮ ಬಂಗಾಳದ ಖಾಸಗಿ ಬಸ್ಸುಗಳ ಒಕ್ಕೂಟವು ತೃತೀಯ ಲಿಂಗಿಗಳಿಗಾಗಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲು ನಿರ್ಧರಿಸಿದೆ. ಈ ಒಕ್ಕೂಟಕ್ಕೆ ಸೇರಿದ ಸುಮಾರು 35 ರಿಂದ 40 ಸಾವಿರ ಬಸ್ಸುಗಳಲ್ಲಿ, ಪ್ರತಿ ಬಸ್ಸುನಲ್ಲಿ ತಲಾ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿರುಸುವದಾಗಿ ಬಸ್ ಸಿಂಡಿಕೇಟ್ ಜಂಟಿ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾಪನ್ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ