Job Description: ನವದೆಹಲಿ: ಆಗಸ್ಟ್ 15 ರಂದು ಭಾರತಾದ್ಯಂತ 74 ನೇ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರದಿಂದ ಆಚರಿಸಲಾಯಿತು. ದೇಶವ್ಯಾಪ್ತಿ ಹರಡಿರುವ ಕೋರೋಣ ಸೋಂಕಿನ ಭೀತಿಯಿಂದ ಈ ಬಾರಿ ಸ್ವಂತ್ರತ್ರೋತ್ಸವಕ್ಕೆ ಕೆಲ ಮಾಗ್ರಸೂಚಿಗಳನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿತ್ತು. ಈ ನಡುವೆ ಕೇಂದ್ರ ಸರ್ಕಾರ 1 ಕೀರ್ತಿ ಚಕ್ರ ಹಾಗೂ 9 ಶೌರ್ಯ ಚಕ್ರ ಪ್ರಶಸ್ತಿ ಘೋಷಿಸಿದೆ. * ಅಬ್ದುಲ್ ರಶೀದ್ ಕಲಾಸ್ ಅವರು ಜಮ್ಮು-ಕಾಶ್ಮಿರದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದು, ಇವರಿಗೆ ಮರಣೋತ್ತರ ಕೀರ್ತಿ ಚಕ್ರ ಘೋಷಣೆ ಮಾಡಲಾಗಿದೆ. * ಜೊತೆಗೆ ಒಟ್ಟು ಒಂಬತ್ತು ಭದ್ರತಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಅವರ ವಿವರ ಈ ಕೆಳಗಿನಂತಿದೆ. - ಲೆಫ್ಟಿನೆಂಟ್ ಕರ್ನಲ್ ಕ್ರಿಶನ್ ಸಿಂಗ್ ರಾವತ್, - ಮೇಜರ್ ಅನಿಲ್ ಉರ್ಸ್, - ಹವಲ್ದಾರ್ ಅಲೋಕ್ ಕುಮಾರ್ ದುಬೆ, - ವಿಂಗ್ ಕಮಾಂಡೀರ್ ವಿಶಾಕ್ ನಾಯರ್, - ಜೆಕೆಪಿಯ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಅಮಿತ್ ಕುಮಾರ್, - ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಬ್ ಇನ್ಸ್ಪೆಕ್ಟರ್ ಮಹಾವೀರ್ ಪ್ರಸಾದ್ ಗೋದಾರ್ (ಮರಣೋತ್ತರ), - ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಎರನ್ನಾ ನಾಯಕ (ಮರಣೋತ್ತರ) - ಸಿಐಎಸ್ಎಫ್ ಕಾನ್ಸ್ಟೇಬಲ್ ಮಹೇಂದ್ರ ಕುಮಾರ್ ಪಾಸ್ವಾನ್ (ಮರಣೋತ್ತರ), - ಸಿಐಎಸ್ಎಫ್ ಕಾನ್ಸ್ಟೇಬಲ್ ಸತೀಶ್ ಪ್ರಸಾದ್ ಕುಶ್ವಾಹ್ (ಮರಣೋತ್ತರ) * ಈ ಪ್ರಶಸ್ತಿಗಳೊಡನೆ ಪೊಲೀಸ್ ಹಾಗೂ ಸೇನಾ ಪಡೆಗಳಿಗೆ ಕೇಂದ್ರ ಸರ್ಕಾರವು ಒಟ್ಟು 926 ಶೌರ್ಯ ಪದಕ, ಹಾಗು 60 ಸೇನಾ ಪದಕ ಘೋಷಣೆ ಮಾಡಿದೆ.