Job Description: ನವದೆಹಲಿ: ಭಾರತವು ಇದೆ ಆಗಸ್ಟ್ 15 ರಂದು ತನ್ನ 74ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡಿತು. ಈ ದಿನ ಇಡೀ ದೇಶಾದ್ಯಂತ ರಾಷ್ಟ್ರಭಕ್ತಿ ಮೊಳಗಿತು. ಕೋವಿಡ್ ಸಂಕಷ್ಟ ನಡುವೆಯೇ ಕೆಲವು ಮುನ್ನೆಚ್ಛರಿಕಾ ಕ್ರಮದೊಂದಿಗೆ ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಸರಳ ಹಾಗು ಸಂಭ್ರಮದಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಮೋದಿ ತಮ್ಮ ಭಾಷಣದ ವೇಳೆ 'ಆತ್ಮನಿರ್ಭರ ಭಾರತ' ಮೂಲ ಉದ್ದೇಶವನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅಂದಾಜು ₹110 ಲಕ್ಷ ಕೋಟಿ ವೆಚ್ಚದ ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು. ಮುಂದಿನ ಒಂದು ಸಾವಿರ ದಿನಗಳಲ್ಲಿ ದೇಶದ ಆರು ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಹಾಗೂ ಲಕ್ಷದ್ವೀಪಕ್ಕೆ ಸಬ್ಮರೀನ್ ಹೈಸ್ಪೀಡ್ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವದಾಗಿ ತಿಳಿಸಿದರು. ಮೋದಿ ಭಾಷಣದಲ್ಲಿ ಕೇಳಿ ಬಂಡ ಇತರೆ ವಿಷಯಗಳು : * ಮಹಿಳೆಯರ ಮದುವೆಯ ಕನಿಷ್ಠ ವಯೋಮಿತಿ ಮರುಪರಿಶೀಲಿಸಲು ತಜ್ಞರ ಸಮಿತಿ ರಚನೆ. *ನೂರು ನಗರಗಳಲ್ಲಿ ಮಾಲಿನ್ಯ ಪ್ರಮಾಣ ತಗ್ಗಿಸಲು ವಿಶೇಷ ಅಭಿಯಾನ * ಏಷ್ಯಾದ ಸಿಂಹ ಮತ್ತು ಡಾಲ್ಫಿನ್ಗಳ ಸಂರಕ್ಷಣೆಗೆ ನೂತನ ಯೋಜನೆಗಳು * ಕೇಂದ್ರಾಡಳಿತ ಪ್ರದೇಶವಾದ ಮೇಲೆ ಜಮ್ಮ ಮತ್ತು ಕಾಶ್ಮೀರದ ಅಭಿವೃದ್ಧಿ * ಜನೌಷಧಿ ಕೇಂದ್ರಗಳ ಮೂಲಕ ದೇಶದ ಐದು ಕೋಟಿ ಬಡ ಮಹಿಳೆಯರಿಗೆ ಕೇವಲ ಒಂದು ರೂಪಾಯಿ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಣೆ