Job Description: ಪ್ರತಿ ವರ್ಷ ಆಗಸ್ಟ್ 13 ರಂದು ಅಂತಾರಾಷ್ಟ್ರೀಯ ಲೆಫ್ಟ್ ಹ್ಯಾಂಡರ್ಸ್ ಡೇ(ಎಡಗೈ ಬಳಕೆದಾರರ ದಿನ) ಆಚರಿಸಲಾಗುತ್ತದೆ. ವಾಷಿಂಗ್ಟನ್ ಪೋಸ್ಟ್ ಆರ್ಟಿಕಲ್ ವರದಿಯನುಸಾರ ಜಗತ್ತಿನ ಶೇ.10 ರಷ್ಟು ಜನರು ಲೆಫ್ಟ್ ಹ್ಯಾಂಡೆಡ್(ಎಡಗೈ ಬಳಕೆದಾರರು) ಆಗಿರುತ್ತಾರೆ ಎಂದು ತಿಳಿದು ಬಂದಿದೆ, ಕಾರಣ ಆಗಸ್ಟ್ 13ನ್ನು ಲೆಫ್ಟ್ ಹ್ಯಾಂಡರ್ಸ್ಗಳಿಗೇ ಮೀಸಲಾಗಿ ಇರಿಸಲಾಗಿದೆ. ಮೊದಲ ಬಾರಿಗೆ 1976ರಲ್ಲಿ ಡೀನ್ ಆರ್.ಕ್ಯಾಂಪ್ಬೆಲ್ ಅವರು ವಿಶ್ವ ಎಡಗೈ ಬಳಕೆದಾರರ ದಿನ ಆಚರಣೆಯನ್ನು ಆರಂಭಿಸಿದರು. ಅಂದಿನಿಂದ ವಿಶ್ವ ಲೆಫ್ಟ್ ಹ್ಯಾಂಡರ್ಸ್ ಡೇಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಲೆಫ್ಟ್ ಹ್ಯಾಂಡೆಡ್ ಬಗೆಗಿನ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಲೆಫ್ಟ್ ಹ್ಯಾಂಡರ್ಸ್ ದಿನವನ್ನು ಆಚರಿಸಲಾಗುತ್ತದೆ. ಕೆಲ ಪ್ರಮುಖ ಎಡಗೈ ಬಳಕೆದಾರರು : * ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ * ಖ್ಯಾತ ಉದ್ಯಮಿ ಬಿಲ್ ಗೇಟ್ಸ್ * ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ * ಲೇಡಿ ಗಾಗಾ (ಗಾಯಕಿ) * ಮೇರಿ ಕ್ಯೂರಿ * ಆಲ್ಬರ್ಟ್ ಐನ್ಸ್ಟೀನ್ * ಹೆಲೆನ್ ಕೆಲೆರ್ * ಲಿಯೋನಾರ್ಡೋ ಡಾವಿಂಚಿ * ಅರಿಸ್ಟಾಟಲ್ * ಅಮಿತಾಬ್ ಬಚ್ಚನ್ * ಸಚಿನ್ ತೆಂಡೂಲ್ಕರ್