Job Description: "ಪಾರದರ್ಶಕ ತೆರಿಗೆ- ಪ್ರಾಮಾಣಿಕ ತೆರಿಗೆದಾರರಿಗೆ ಗೌರವ" ಪ್ಲಾಟ್ ಫಾರ್ಮ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಈ ಪ್ಲಾಟ್ ಫಾರಂ ನ ಮುಖ್ಯ ಉದ್ದೇಶವೆಂದರೆ ತೆರಿಗೆದಾರರ ಸಬಲೀಕರಣ, ಪಾರದರ್ಶಕ ವ್ಯವಸ್ಥೆ ಒದಗಿಸುವುದು ಮತ್ತು ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು ಆಗಿದೆ. * ಮುಖರಹಿತವಾದ (ಫೇಸ್ ಲೆಸ್) ಅಸೆಸ್ ಮೆಂಟ್, ಮುಖರಹಿತ ಅರ್ಜಿ ಮತ್ತು ತೆರಿಗೆ ಪದ್ಧತಿಯನ್ನು ಜನಕೇಂದ್ರಿತ ಹಾಗೂ ಜನಸ್ನೇಹಿಯಾಗಿ ಮಾಡುವದು ಮುಖ್ಯ ಉದ್ದೇಶವಾಗಿದೆ.