Job Description: ನವದೆಹಲಿ : ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈಗಾಗಲೇ ಇ-ಪಾಸ್ಪೋರ್ಟ್ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಈ ಯೋಜನೆಯನ್ನು ಭಾರತದಲ್ಲೂ ಜಾರಿಗೆ ತರಲು ಕೇಂದ್ರ ಸರ್ಕಾರವು ಮುಂದಾಗಿದ್ದು, 2021 ರ ವೇಳೆಗೆ ಭಾರತೀಯರಿಗೆ ಇ- ಪಾಸ್ಪೋರ್ಟ್ ಲಭ್ಯವಾಗುವ ನಿರೀಕ್ಷೆಯಿದೆ. ಈ ನೂತನ ವ್ಯವಸ್ಥೆ ಜಾರಿಯಿಂದಾಗಿ ಪಾಸ್ಪೋರ್ಟ್ ನಕಲು ಮತ್ತು ಅದರ ದುರ್ಬಳಕೆಯನ್ನು ತಡೆಯಬಹುದಾಗಿದೆ. E-Passport: ಚಿಪ್ ಇರುವ ಎಲೆಕ್ಟ್ರಾನಿಕ್ ಪಾಸ್ಪೋರ್ಟ್ ಇದಾಗಿದ್ದು, ತಯಾರಿಗೆ ಅಗತ್ಯ ಇರುವ ವಸ್ತುಗಳ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಪುಸ್ತಕದಲ್ಲಿ ಪಾಸ್ಪೋರ್ಟ್ ಪ್ರಿಂಟ್ ಹಾಕಿ ನೀಡಲಾಗುತ್ತಿದ್ದು, ಈ ವ್ಯವಸ್ಥೆ ತಡೆಯಲು ಇ-ಪಾಸ್ಪೋರ್ಟ್ ಸಹಾಯಕಾರಿಯಾಗಿದೆ.