Job Description: ಲೋಕಸಭೆಯು ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ಆರಂಭಿಕ ಹಂತದ (beginners level) ನೂತನ ಫ್ರೆಂಚ್ ಕೋರ್ಸ್ ಅನ್ನು ಆರಂಭಿಸಲಾಗಿದೆ. ಕೋರ್ಸ್ ಅಡಿಯಲ್ಲಿ ಸುಮಾರು 57 ಅಧಿಕಾರಿಗಳನ್ನು ನೋಂದಾಯಿಸಲಾಗಿದೆ. ಕೋರ್ಸ್ ಕುರಿತು : ಆಂತರಿಕ ಸಂಪರ್ಕದ ಈ ಜಗತ್ತಿನಲ್ಲಿ ಫ್ರೆಂಚ್ ಭಾಷೆಯ ಜ್ಞಾನವನ್ನು ಪಡೆಯಲು ಕೋರ್ಸ್ ಅತ್ಯಗತ್ಯವಾಗಿರುವುದರಿಂದ ಕೋರ್ಸ್ ಅನ್ನು ಆರಂಭಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸಂಸದೀಯ ಪ್ರಜಾಪ್ರಭುತ್ವದ ಸಂಶೋಧನಾ ಮತ್ತು ತರಬೇತಿ ಸಂಸ್ಥೆ (PRIDE) ಜಾರಿಗೆ ತರಲಿದೆ. ಬರುವ ದಿನಗಳಲ್ಲಿ ಲೋಕಸಭೆಯು ಜರ್ಮನ್, ರಷ್ಯನ್, ಸ್ಪ್ಯಾನಿಷ್ ಮತ್ತು ಇತರ ಪ್ರಮುಖ ವಿಶ್ವ ಭಾಷೆಗಳಲ್ಲಿ ಇದೇ ರೀತಿಯ ಕೋರ್ಸ್ಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ.