Job Description: ತಿರುವನಂತಪುರಂ : ಇತ್ತೀಚಿಗೆ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ವಂದೇ ಭಾರತ್ ಮಿಷನ್ ನ ವಿಮಾನವೊಂದು ಈ ನಿಲ್ದಾಣದಲ್ಲಿ ಬಂದಿಳಿಯಬೇಕಾದರೆ ಅಪಘಾತಕ್ಕೀಡಾಗಿ, 18 ಪ್ರಯಾಣಿಕರು ಸಾವಿಗೀಡಾದರು. ಈ ಅಪಘಾತಕ್ಕೆ ಮುಖ್ಯ ಕಾರಣ ಮುಂಗಾರು ಸಮಯದಲ್ಲಿನ ಹವಾಮಾನವೇ ಕಾರಣ ಎಂದು ತಿಳಿದು ಬಂದ ಹಿನ್ನಲೆ ಭಾರತೀಯ ವಿಮಾನಯಾನ ಪ್ರಾಧಿಕಾರವು ಮಳೆಗಾಲದ ಸಮಯದಲ್ಲಿ ಈ ನಿಲ್ದಾಣಕ್ಕೆ ದೊಡ್ಡ ವಿಮಾನಗಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. * ಕೋಯಿಕ್ಕೋಡ್ ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್ವೇ ಇದ್ದರೆ ಅದು ಟೇಬಲ್ ಟಾಪ್ ವಿಮಾನ ನಿಲ್ದಾಣವಾಗುತ್ತದೆ. * ರಾಜ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಕೂಡ ಟೇಬಲ್ ಟಾಪ್ ನಿಲ್ದಾಣವಾಗಿದೆ.