Job Description: ಭಾರತೀಯ ವಾಯುಪಡೆಯು ಲಡಾಖ್ ಪ್ರದೇಶದಲ್ಲಿ ಎಚ್ಎಎಲ್ ನಿರ್ಮಿತ ಎರಡು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ಗಳನ್ನು (LCH) ನಿಯೋಜನೆ ಮಾಡಿದೆ. ಭಾರತ ಮತ್ತು ಚೀನಾ ರಾಷ್ಟ್ರಗಳ ಗಡಿ ಪ್ರದೇಶವಾದ ಲಡಾಕ್ ನಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನಲೆ ಹೆಚ್ಚಿನ ಎತ್ತರದಲ್ಲಿ ಕಾರ್ಯಾಚರಣೆಗಾಗಿ ಇವುಗಳನ್ನು ನಿಯೋಜಿಸಲಾಗಿದೆ. ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ : * LCH ಗಳು ಅವಳಿ ಎಂಜಿನ್ ಗಳನ್ನು ಹೊಂದಿದ್ದು, ಇದು ವಿಶ್ವದ ಅತ್ಯಂತ ಹಗುರವಾದ ದಾಳಿ ಹೆಲಿಕಾಪ್ಟರ್ ಆಗಿರುತ್ತದೆ. * ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಇವುಗಳನ್ನು ಅಭಿವೃದ್ಧಿಪಡಿಸಿದೆ ಅಲ್ಲದೆ ಇವು ಆತ್ಮ ನಿರ್ಭಾರ ಭಾರತ್ ಅಭಿಯಾನದ ಅಡಿಯಲ್ಲಿ ದೇಶದ ರಕ್ಷಣೆಯ ಅಗತ್ಯತೆಗಳನ್ನು ಒದಗಿಸುತ್ತವೆ. * LCH ಗಳು ಹಗಲು ಮತ್ತು ರಾತ್ರಿ ಯಾವುದೇ ರೀತಿಯ ಗುರಿಯನ್ನು ಹೊಡೆಯಬಹುದು. ಹಾಗು ವಿವಿಧ ಹವಾಮಾನದ ವಾತಾವರಣದಲ್ಲಿಯೂ ಸಾಕಷ್ಟು ಎತ್ತರದಲ್ಲಿ ಶಸ್ತ್ರಾಸ್ತ್ರ ಸಾಗಿಸುವ ಸಾಮರ್ಥ್ಯ ಹೊಂದಿದೆ.