Job Description: ನವದೆಹಲಿ: ಭಾರತೀಯ ಸೇನಾ ಪಡೆಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸುಮಾರು 8,722.38 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಿದೆ. * ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಿಂದ 106 ಬೇಸಿಕ್ ಟ್ರೇನರ್ ವಿಮಾನಗಳು(ಎಚ್ಟಿಟಿ-40) * ನೌಕಾಪಡೆಯ ಬಲವರ್ಧನೆಗೆ ಮತ್ತು ಕರವಾಳಿ ರಕ್ಷಣಾ ಪಡೆಗೆ ಯುದ್ಧನೌಕೆಗಳಲ್ಲಿ ಅಳವಡಿಸಲಾಗಿರುವ ಸೂಪರ್ ರಾಪಿಡ್ ಗನ್ ಮೌಂಟ್ (ಎಸ್ಆರ್ಜಿಎಂ), ಕ್ಷಿಪಣಿಗಳು ಮತ್ತು ಫಾಸ್ಟ್ ಅಟ್ಯಾಕ್ ಕ್ರಾಫ್ಟ್, ಭೂ ಸೈನ್ಯಕ್ಕಾಗಿ 125 ಎಂಎಂ ಎಪಿಎಫ್ಎಸ್ಡಿಎಸ್ (ಆರ್ಮರ್ ಫಯರಿಂಗ್ ಫಿನ್ ಸ್ಟೆಬಿಲೈಸ್ಡ ಡಿಸ್ಕಾರ್ಡಿಂಗ್ ಸಬೊಟ್) ಮದ್ದುಗುಂಡುಗಳನ್ನು ಖರೀದಿಗೆ ಒಪ್ಪಿಗೆ ನೀಡಲಾಗಿದೆ.