Job Description: ನವದೆಹಲಿ: ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿಯವರ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ವಿಶ್ವದ ಅಗ್ರ 100 ಕಂಪನಿಗಳಲ್ಲಿ ಸ್ಥಾನಪಡೆದಿದೆ. ಫಾರ್ಚೂನ್ ಬಿಡುಗಡೆ ಮಾಡಿರುವ 2020 ನೇ ಸಾಲಿನ ರ್ಯಾಂಕಿಂಗ್ ಪಟ್ಟಿಯಲ್ಲಿ ತೈಲದಿಂದ ಟೆಲಿಕಾಂ ವರೆಗೆ ಬಹುತೇಕ ವಲಯಗಳಲ್ಲಿ ತನ್ನ ವ್ಯವಹಾರವನ್ನು ಹೊಂದಿರುವ ರಿಲಯನ್ಸ್ ಸಂಸ್ಥೆಯು 96 ನೇ ಸ್ಥಾನ ಪಡೆದಿದೆ. * ವಿಶೇಷವೆಂದರೆ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಏಕೈಕ ಕಂಪನಿಯಾಗಿ ರಿಲಯನ್ಸ್ ಹೊರಹೊಮ್ಮಿದೆ. * 2012 ನೇ ಸಾಲಿನಲ್ಲಿ ರಿಲಯನ್ಸ್ ಸಂಸ್ಥೆಯು 99 ನೇ ಸ್ಥಾನ ಪಡೆದಿತ್ತು.