Job Description: ಇಂದೋರ್ : ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಮಧ್ಯ ಪ್ರದೇಶದ ಇಂದೋರ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ 70 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಭಾರತದ ಉರ್ದು ಕಾವ್ಯ ಜಗತ್ತಿನ ಅತ್ಯಂತ ಪ್ರಸಿದ್ಧ ಕವಿಯಾಗಿದ್ದ ಇವರ ಕವಿಗೋಷ್ಠಿಗಳಲ್ಲಿ ಅಪಾರ ಪ್ರಮಾಣದ ಜನಸೇರುತ್ತಿದ್ದರು. ಅಲ್ಲದೆ ಇವರ ಶಾಯರಿಗಳಿಗೆ ದೇಶ ವಿದೇಶಗಳಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದರು.