Job Description: ಲಂಡನ್ (ಪಿಟಿಐ): ಯೋಗಾಭ್ಯಾಸದಲ್ಲಿ ತೋರಿದ ಸಾಧನೆಗಾಗಿ ಭಾರತ ಮೂಲದ ಬ್ರಿಟಿಷ್ ಬಾಲಕ, 10 ವರ್ಷದ ಈಶ್ವರ್ ಶರ್ಮಾಗೆ ‘ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್– 2020’ ಪ್ರಶಸ್ತಿ ಲಭಿಸಿದೆ. ಈಶ್ವರ್ ತಂದೆ ಡಾ.ವಿಶ್ವನಾಥ್ ಮೈಸೂರಿನವರು. ಸದ್ಯ ಆಗ್ನೇಯ ಬ್ರಿಟನ್ ಕೆಂಟ್‌ನಲ್ಲಿ ನೆಲೆಸಿದ್ದಾರೆ. ಬ್ರಿಟನ್ ಹಾಗೂ ಜಗತ್ತಿನ ವಿವಿಧೆಡೆ ನಡೆದ 100ಕ್ಕೂ ಅಧಿಕ ಯೋಗ ಕಾರ್ಯಕ್ರಮಗಳಲ್ಲಿ ಈ ಬಾಲಕ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾನೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.