Job Description: ➤ ಉತ್ತರ ಪ್ರದೇಶ ಸರ್ಕಾರ ಹಾಗೂ UPNEDA (ಉತ್ತರ ಪ್ರದೇಶ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ) ಸಹಯೋಗದೊಂದಿಗೆ, ಐಐಟಿ ಕಾನ್‌ಪುರ (IIT Kanpur) ಕ್ಯಾಂಪಸ್‌ನಲ್ಲಿ ಹಸಿರು ಹೈಡ್ರೋಜನ್ ಸಂಶೋಧನೆಗಾಗಿ ನೂತನ ಉತ್ಕೃಷ್ಟತಾ ಕೇಂದ್ರವನ್ನು (Centre of Excellence - CoE) ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ➤ ಉತ್ತರ ಪ್ರದೇಶ ಹಸಿರು ಹೈಡ್ರೋಜನ್ ನೀತಿ 2024ರ ಅಡಿಯಲ್ಲಿ, UPNEDA ಸಂಸ್ಥೆಯ ಅನುಮೋದನೆಯೊಂದಿಗೆ, ಐಐಟಿ ಕಾನ್‌ಪುರವು (IIT Kanpur) ಕಮ್ಮಿ ವೆಚ್ಚದಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆ, ಶೇಖರಣೆ, ಸಾಗಣೆ ಹಾಗೂ ಬಳಕೆಯನ್ನು ಉತ್ತೇಜಿಸಲು ECOGEN (Centre of Excellence on Innovative and Integrated Ecosystem for Green Hydrogen) ಎಂಬ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುತ್ತಿದೆ. ➤ ECOGEN ಕೇಂದ್ರದ ಪ್ರಮುಖ ಸಂಶೋಧನಾ ಕ್ಷೇತ್ರಗಳು: ಈ ಉತ್ಕೃಷ್ಟತಾ ಕೇಂದ್ರವು ಹಸಿರು ಹೈಡ್ರೋಜನ್ ವ್ಯವಸ್ಥೆಯ (Green Hydrogen Ecosystem) ನಾಲ್ಕು ಪ್ರಮುಖ ಹಂತಗಳಲ್ಲಿ ಸಂಶೋಧನೆ ನಡೆಸಲಿದೆ: ಹೈಡ್ರೋಜನ್ ಉತ್ಪಾದನೆ (Generation): ನವೀಕರಿಸಬಹುದಾದ ವಿದ್ಯುತ್ ಶಕ್ತಿ (ಸೌರ/ಪವನ) ಬಳಸಿ ನೀರನ್ನು ವಿದ್ಯುದ್ವಿಚ್ಛೇದನ (Electrolysis) ಮಾಡುವ ಮೂಲಕ ವೆಚ್ಚ-ಸಮರ್ಥ ಹಸಿರು ಹೈಡ್ರೋಜನ್ ತಯಾರಿಕೆ. ಶೇಖರಣೆ (Storage): ಹೈಡ್ರೋಜನ್ ಅನಿಲವನ್ನು ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಸಂಗ್ರಹಿಸುವ ತಂತ್ರಜ್ಞಾನಗಳ ಅಭಿವೃದ್ಧಿ. ಬಳಕೆ (Utilization): ಕೈಗಾರಿಕೆಗಳು, ಸಾರಿಗೆ ಮತ್ತು ಇಂಧನ ವಲಯಗಳಲ್ಲಿ ಹೈಡ್ರೋಜನ್ ಬಳಕೆಯನ್ನು ವೃದ್ಧಿಸುವುದು. ವ್ಯವಸ್ಥೆಯ ಸಂಯೋಜನೆ (System Integration): ಅಸ್ತಿತ್ವದಲ್ಲಿರುವ ಇಂಧನ ಜಾಲಗಳಿಗೆ ಹೈಡ್ರೋಜನ್ ಶಕ್ತಿಯನ್ನು ಸಂಯೋಜಿಸುವುದು. ➤ ಹಸಿರು ಹೈಡ್ರೋಜನ್ (Green Hydrogen): ಸೌರಶಕ್ತಿ ಅಥವಾ ಪವನ ಶಕ್ತಿಯಂತಹ ನವೀಕರಿಸಬಹುದಾದ ಶಕ್ತಿಯನ್ನು ಬಳಸಿ, ನೀರಿನ ವಿದ್ಯುದ್ವಿಚ್ಛೇದನದ (Electrolysis of Water) ಮೂಲಕ ಪಡೆಯಲಾಗುವ ಹೈಡ್ರೋಜನ್ ಗ್ಯಾಸ್‌ ಅನ್ನು 'ಹಸಿರು ಹೈಡ್ರೋಜನ್' ಎನ್ನಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾರ್ಬನ್ ಹೊರಸೂಸುವಿಕೆ (Zero Carbon Emission) ಇರುವುದಿಲ್ಲ.ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ