Job Description: ಸಿಡ್ನಿ, ಜನವರಿ 8: ಕಾಳ್ಗಿಚ್ಚು ತೀವ್ರವಾಗಿ ವ್ಯಾಪಿಸಿರುವ ಆಸ್ಟ್ರೇಲಿಯಾದಲ್ಲಿ ಅಗ್ನಿಯ ಅಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ಕೈಗೂಡುತ್ತಿಲ್ಲ. ಬೆಂಕಿಯ ಆರ್ಭಟಕ್ಕೆ ಈಗಾಗಲೇ ಸುಮಾರು 480 ಮಿಲಿಯನ್ ಪ್ರಾಣಿಗಳು ಸುಟ್ಟು ಕರಕಲಾಗಿವೆ. ಈ ನಡುವೆ ಆಸ್ಟ್ರೇಲಿಯಾ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದೆ. ನೀರು ಉಳಿಸಲು ಒಂಟೆಗಳನ್ನು ಕೊಲ್ಲಲು ಮುಂದಾಗಿದೆ. ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಸಾವಿರಾರು ಒಂಟೆಗಳನ್ನು ಸಾಯಿಸುವ ಐದು ದಿನಗಳ ಕಾರ್ಯಾಚರಣೆಯನ್ನು ಆಸ್ಟ್ರೇಲಿಯಾ ಅಧಿಕಾರಿಗಳು ಆರಂಭಿಸಿದ್ದಾರೆ. ಬುಧವಾರ ಈ ಐದು ದಿನಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಸುಮಾರು 10,000 ಒಂಟೆಗಳನ್ನು ಸಾಯಿಸುವ ಕಾರ್ಯಕ್ಕೆ ಸರ್ಕಾರ ಹೆಲಿಕಾಪ್ಟರ್‌ಗಳನ್ನು ಕಳುಹಿಸಲಿದೆ. ಒಂಟೆ ಹತ್ಯೆ ಕಾರ್ಯಾಚರಣೆಯು ಸುಮಾರು 2,300 ಮೂಲ ನಿವಾಸಿಗಳು ವಾಸಿಸುತ್ತಿರುವ ಎಪಿವೈ ಲ್ಯಾಂಡ್ಸ್ ಎಂಬಲ್ಲಿ ಮೊದಲು ಆರಂಭವಾಗಿದೆ. ಈ ಪ್ರದೇಶದಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮೀಣ ಸಮುದಾಯದ ಸ್ಥಳಗಳಲ್ಲಿ ತುಂಬಿಹೋಗಿವೆ. ಒಂಟೆಗಳಿಂದಾಗಿ ಅವರ ಆಹಾರ ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆಯುಂಟಾಗಿದೆ. ಅಲ್ಲದೆ ಅವರ ಮೂಲಸೌಕರ್ಯ ವ್ಯವಸ್ಥೆಗಳಿಗೆ ಅವು ಹಾನಿಮಾಡುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.