Job Description: ಶಿವಮೊಗ್ಗ(ಜ.08): ಕನ್ನಡ ಭಾಷೆಯ ಪ್ರಥಮ ಶಾಸನ ಯಾವುದು ಎಂದು ಇವತ್ತಿಗೂ ಯಾರಿಗೆ ಪ್ರಶ್ನೆ ಮಾಡಿದರೂ ಮೊದಲು ಕೇಳಿ ಬರುವ ಹೆಸರು ಹಲ್ಮಿಡಿ ಶಾಸನ. ಅದರೆ, ಅದಕ್ಕಿಂತ ಹಳೆಯ ಪ್ರಾಚೀನ ಶಾಸನ ಸಹ ಇತ್ತು ಎಂಬುದು ಉತ್ಖನನದಿಂದ ಬೆಳಕಿಗೆ ಬಂದಿದೆ. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಕನ್ನಡ ಭಾಷೆಯ ಶಾಸನ ಕ್ರಿ.ಶ. 370 ರಿಂದ 450 ಮಧ್ಯಮ ಅವಧಿಯಲ್ಲೇ ಇತ್ತು ಎಂಬುದು ದೃಡಪಟ್ಟಿದೆ. ಇತಿಹಾಸ ಮಾಹಿತಿಗಳ ಪ್ರಕಾರ ಕನ್ನಡದ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನವಾಗಿದೆ. ಅದು ಸರಿ ಸುಮಾರು ಕ್ರಿ.ಶ. 450 ಅವಧಿಯದ್ದು. ಇದನ್ನೇ ನಾವು ಕನ್ನಡದ ಮೊಟ್ಟ ಮೊದಲ ಶಾಸನ ಎಂದು ಇಲ್ಲಿಯವರೆಗೂ ಓದಿಕೊಂಡು ಬಂದಿದ್ದೇವೆ. ಅದರೆ ಈಗ ತಾಳಗುಂದದಲ್ಲಿ ಸಿಕ್ಕಿರುವ ಶಾಸನ ಕನ್ನಡದ ಇತಿಹಾಸವನ್ನು ಇನ್ನೂ ನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂದು ಹೋಗುತ್ತದೆ. ಕ್ರಿ.ಶ. 370 ರಿಂದ 450 ಮಧ್ಯಮ ಅವಧಿಯಲ್ಲಿ ಈಗ ಸಿಕ್ಕಿರುವ ಶಾಸನ ರಚನೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.