Job Description: ನವದೆಹಲಿ :ದೇಶದ ಆರ್ಥಿಕ ವೃದ್ಧಿ ದರ ಇಳಿಮುಖವಾಗಿದೆ. ಆರ್ಥಿಕತೆ ಸುಧಾರಣೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ಗೆ ಮುಂಚಿತವಾಗಿ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 130 ಭಾರತೀಯರ ಆಕಾಂಕ್ಷೆಗಳನ್ನು ಕೇಂದ್ರ ಬಜೆಟ್ ಪ್ರತಿನಿಧಿಸುತ್ತದೆ. ದೇಶದ ಅಭಿವೃದ್ಧಿಗೆ ಹಾದಿ ತೋರಿಸುತ್ತದೆ. ಈ ವರ್ಷದ ಬಜೆಟ್ ಗಾಗಿ ನಿಮ್ಮಲ್ಲಿರುವ ಯೋಜನೆಗಳು ಹಾಗೂ ಸಲಹೆಗಳನ್ನು ನೀಡುವಂತೆ ದೇಶದ ಜನರಿಗೆ ಆಹ್ವಾನ ನೀಡಿದ್ದಾರೆ. ಇದರೊಂದಿಗೆ ಸಲಹೆ ನೀಡುವಂತೆ ಮೈ ಗೌ ಇಂಡಿಯಾ ಟ್ವಿಟರ್ ಖಾತೆಯ ಲಿಂಕ್ ನ್ನು ಪ್ರಧಾನಿ ಹಂಚಿಕೊಂಡಿದ್ದಾರೆ