Job Description: ➤ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪೂರೈಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರದ ಹೊಸ ವೀಸಾ ನಿಯಮವು ಸವಾಲಾಗಿ ಪರಿಣಮಿಸಿದೆ. ಅಮೆರಿಕದ ಒಳನಾಡಿನ ಭದ್ರತಾ ಇಲಾಖೆ (Department of Homeland Security - DHS) ಎಫ್-1 (F-1) ವಿದ್ಯಾರ್ಥಿ ವೀಸಾ ನಿಯಮಾವಳಿಗಳಲ್ಲಿ ಪ್ರಮುಖ ತಿದ್ದುಪಡಿಗಳನ್ನು ತಂದಿದ್ದು, ದಶಕಗಳಿಂದ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಬದಲಾಯಿಸಿದೆ.➤ ಹೊಸ F-1 ವೀಸಾ ನೀತಿಯ ಪ್ರಮುಖ ಮುಖ್ಯಾಂಶಗಳು:1. ಡ್ಯುರೇಷನ್ ಆಫ್ ಸ್ಟೇಟಸ್' (Duration of Status) ರದ್ದು: ಈ ಮೊದಲು ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳಿಗೆ 'ಡ್ಯುರೇಷನ್ ಆಫ್ ಸ್ಟೇಟಸ್' (D/S) ಆಧಾರದ ಮೇಲೆ ವೀಸಾ ನೀಡಲಾಗುತ್ತಿತ್ತು. ಅಂದರೆ, ಕೋರ್ಸ್ ಮುಗಿಯುವವರೆಗೆ ಅಥವಾ ಅಧ್ಯಯನ ಮುಂದುವರಿಸುವವರೆಗೆ ಅವರು ದೇಶದಲ್ಲಿ ಕಾನೂನುಬದ್ಧವಾಗಿ ಇರಲು ಅವಕಾಶವಿತ್ತು.ಹೊಸ ನಿಯಮ: ಈಗ D/S ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ವಿದ್ಯಾರ್ಥಿಗಳ ವಾಸ್ತವ್ಯದ ಅವಧಿಯನ್ನು ಗರಿಷ್ಠ ೪ ವರ್ಷಗಳಿಗೆ (4 Years) ನಿಗದಿಪಡಿಸಲಾಗಿದೆ.ಪಿಎಚ್‌ಡಿ (Ph.D) ಅಥವಾ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳು ನಾಲ್ಕು ವರ್ಷ ಮುಗಿದ ನಂತರ ಹೆಚ್ಚುವರಿ ವಾಸ್ತವ್ಯಕ್ಕಾಗಿ ಪ್ರತ್ಯೇಕವಾಗಿ ಅರ್ಜಿ (Form I-539 Extension of Stay) ಸಲ್ಲಿಸಬೇಕಾಗುತ್ತದೆ.2. ಗ್ರೇಸ್ ಪೀರಿಯಡ್ (Grace Period) ಕಡಿತ: ಹಿಂದಿನ ನಿಯಮ: ಶಿಕ್ಷಣ ಅಥವಾ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಪೂರ್ಣಗೊಂಡ ನಂತರ ವಿದ್ಯಾರ್ಥಿಗಳಿಗೆ ಅಮೆರಿಕ ತೊರೆಯಲು ಅಥವಾ ಬೇರೆ ವೀಸಾಗೆ ಬದಲಾಯಿಸಲು 6೦ ದಿನಗಳ (60 Days) ಗ್ರೇಸ್ ಪೀರಿಯಡ್ ಸಿಗುತ್ತಿತ್ತು.ಹೊಸ ನಿಯಮ: ಈ ಗ್ರೇಸ್ ಪೀರಿಯಡ್ ಅನ್ನು ಅರ್ಧಕ್ಕಿಳಿಸಲಾಗಿದ್ದು, ಇನ್ನು ಮುಂದೆ ಕೇವಲ ೩೦ ದಿನಗಳ (30 Days) ಸಮಯ ಮಾತ್ರ ಲಭ್ಯವಿರುತ್ತದೆ.3. OPT ಮತ್ತು ವೀಸಾ ವಿಸ್ತರಣೆಗೆ ಪ್ರತ್ಯೇಕ ಅರ್ಜಿ: ಶಿಕ್ಷಣ ಮುಗಿದ ನಂತರ ದೊರೆಯುವ 'ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್' (OPT) ಮೂಲಕ ಉದ್ಯೋಗ ಪಡೆಯಲು ಬಯಸುವ ವಿದ್ಯಾರ್ಥಿಗಳು ಇನ್ಮುಂದೆ:ಉದ್ಯೋಗ ಅನುಮತಿಗಾಗಿ : Form I-765ವಾಸ್ತವ್ಯ ವಿಸ್ತರಣೆಗಾಗಿ: Form I-539— ಈ ಎರಡಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ.➤ ಅಮೆರಿಕದಲ್ಲಿ ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿರುವ F-1 ವಿದ್ಯಾರ್ಥಿಗಳು ಮಾರ್ಚ್ 18, 2027ರ ಒಳಗಾಗಿ OPT ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ವಾಸ್ತವ್ಯ ವಿಸ್ತರಣೆ ಫಾರ್ಮ್‌ಗಳಿಂದ ವಿನಾಯಿತಿ ಸಿಗಲಿದ್ದು, ಆ ಗಡುವಿನ ನಂತರ ಹಾಗೂ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ನಿಯಮಗಳು ಕಡ್ಡಾಯವಾಗಿ ಅನ್ವಯಿಸುತ್ತವೆ.