Job Description: * ಯಾವ ಲಾಭದ ಉದ್ದೇಶಗಳಿಲ್ಲದೆ ಭಾರತ ದೇಶದ ಜನರಿಗೆ ಡಿಜಿಟಲ್ ಮೂಲಕ ಸೇವೆಒದಗಿಸುತ್ತಿರುವ ಯು.ಪಿ.ಐ, ಒ.ಎನ್.ಡಿ.ಸಿ ಮತ್ತು ಆಧಾರ್ ನಂತಹ ಸೇವೆಗಳನ್ನು ಮೈಕ್ರೋಸಾಫ್ಟ್ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯ ನಾದೆಲ್ಲಾ ರವರು ಪ್ರಶಂಸಿಸಿದರು.* ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ "ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ತಂತ್ರಜ್ಞಾನ ಶೃಂಗ" ಸಮ್ಮೇಳನದಲ್ಲಿ ಸತ್ಯ ನಾದೆಲ್ಲಾ ರವರು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಂತಹ ಸೇವೆ ದೊಡ್ಡದು ಎಂದು ಮಾತನಾಡಿದರು.* ಇಸ್ರೋ - ಮೈಕ್ರೋಸಾಫ್ಟ್ ಒಪ್ಪಂದ : ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಮೈಕ್ರೋಸಾಫ್ಟ್ ಜನೆವರಿ 5 ರಂದು ಒಪ್ಪಂದಕ್ಕೆ ಸಹಿ ಹಾಕಿವೆ.