Job Description: * ಭಾರತ್ ಮಾಲಾ ಯೋಜನೆಯಡಿ ಭಾರತದಲ್ಲಿ ಅಂದಾಜು 4.5 ಲಕ್ಷ ರೂ ವೆಚ್ಚದ ಒಟ್ಟು 10 ಸಾವಿರ ಕಿ.ಮೀ ಉದ್ದದ 27 ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ಮತ್ತು ಕಾರಿಡಾರ್ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಒಂದು ಎಕ್ಸ್ ಪ್ರೆಸ್ ವೇ ಹಾಗೂ ಎರಡು ಆರ್ಥಿಕ ಕಾರಿಡಾರ್ ಕರ್ನಾಟಕದ ಮೂಲಕ ಹಾದುಹೋಗಲಿವೆ ಎಂದು ಕೇಂದ್ರ ಸಾರಿಗೆ ಸಚಿವರು ನಿತಿನ್ ಗಡ್ಕರಿ ತಿಳಿಸಿದ್ದಾರೆ. * ಭಾರತ್ ಮಾಲಾ ಯೋಜನೆಯ ಎರಡನೇ ಹಂತದಲ್ಲಿ ಪುಣೆ - ಬೆಂಗಳೂರು ನಡುವೆ ಗ್ರೇನ್ ಫೀಲ್ಡ್ ಹೆದ್ದಾರಿ ನಿರ್ಮಿಸಲಾಗುತ್ತದೆ ಹಾಗೂ ಇದು ೬ ಪಥಗಳ ಹೆದ್ದಾರಿಯಾಗಿದ್ದು, 700 ಕಿ.ಮೀ ಇರಲಿದೆ. ಇದರ ವೆಚ್ಚ 45 ಸಾವಿರ ಕೋಟಿಯಾಗಿದೆ.