Job Description: * ರಾಯಚೂರು, ಕೊಪ್ಪಳ, ಗದಗ, ಶಿವಮೊಗ್ಗ ರಿಂಗ್ ರಸ್ತೆ ಕಾಮಗಾರಿಯನ್ನು ಈ ವರ್ಷನಿರ್ಮಿಸಲಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. * ಬೆಂಗಳೂರು - ಮೈಸೂರು ನಡುವಿನ ದಶಪಥಗಳ ಹೆದ್ದಾರಿಯನ್ನು ಫೆಬ್ರುವರಿ ಅಂತ್ಯದಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವರು ನಿತಿನ್ ಗಡ್ಕರಿಯವರು ತಿಳಿಸಿದರು.* ಶಿರಡಿ ಘಾಟಿನಲ್ಲಿ 10 ಸಾವಿರ ಕೋಟಿಯ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲು ಹಾಗೂ ಬೆಂಗಳೂರು ನಗರದ ಸುತ್ತ 12 ಉಪನಗರಗಳ ಮೂಲಕ 288 ಕಿಲೋಮೀಟರ್ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಗಡ್ಕರಿಯವರು ತಿಳಿಸಿದ್ದಾರೆ.