Job Description: * ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ದಿಗ್ಗಜ ಸ್ಪಿನ್ನರ್ ಶೇನ್‌ ವಾರ್ನ್‌ ರವರಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ ವಿಶೇಷ ಗೌರವ ಸಮರ್ಪಿಸಿದೆ, ಅವರ ಹೆಸರಿನಲ್ಲಿ "ಶೇನ್ ವಾರ್ನ್ ವಾರ್ಷಿಕ ಟೆಸ್ಟ್ ಕ್ರಿಕೆಟಿಗ" ಎಂಬ ಪ್ರಶಸ್ತಿ ನೀಡಲು ನಿರ್ಧರಿಸಿದೆ. * ಈ ಮೊದಲು "ಆಸ್ಟ್ರೇಲಿಯಾದ ವರ್ಷದ ಟೆಸ್ಟ್ ಆಟಗಾರ" ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು. ಅದಕ್ಕೆ ಮರುನಾಮಕರಣ ಮಾಡಿದ ಮಂಡಳಿಯು, ಇನ್ನು ಮುಂದೆ 'ಶೇನ್ ವಾರ್ನ್ ವಾರ್ಷಿಕ ಟೆಸ್ಟ್ ಕ್ರಿಕೆಟಿಗ' ಹೆಸರಲ್ಲಿ ಪ್ರಶಸ್ತಿ ನೀಡಲಿದೆ. 2006 ರಲ್ಲಿ ಶೇನ್ ವಾರ್ನ್ "ವರ್ಷದ ಟೆಸ್ಟ್ ಕ್ರಿಕೆಟಿಗ" ಪ್ರಶಸ್ತಿಗೆ ಭಾಜನರಾಗಿದ್ದರು.