Job Description: * ವಿಶ್ವದ ನಂ.1 ಟೆನಿಸ್ ಆಟಗಾರ್ತಿ ಯಾಗಿರುವ ಇಗಾ ಸ್ವಿಯಾಟೆಕ್ ರನ್ನು 2022ರ 'ಯುರೋಪಿಯನ್ ಸ್ಪೋರ್ಟ್ಸ್ ಪರ್ಸನ್ ಆಫ್‌ ದಿ ಇಯರ್' ಪ್ರಶಸ್ತಿಗೆ ಪೋಲ್ಯಾಂಡ್‌ನ ಸುದ್ದಿಸಂಸ್ಥೆಗಳು(ಪಿಎಪಿ)ಆಯ್ಕೆ ಮಾಡಿವೆ. ಸತತ ಎರಡನೇ ವರ್ಷ ಟೆನಿಸ್ ಆಟಗಾರರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. * 2021ರಲ್ಲಿ ನೊವಾಕ್ ಜೊಕೊವಿಕ್ ಈ ಪ್ರಶಸ್ತಿಯನ್ನು ಜಯಿಸಿದ್ದರು. 1958ರಿಂದ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುವನ್ನು ಯುರೋಪಿಯನ್ ಸ್ಪೋರ್ಟ್ಸ್ ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷ 65ನೇ ಆವೃತ್ತಿಯ ಪ್ರಶಸ್ತಿಯನ್ನು 20 ಅಂತರ್ ರಾಷ್ಟ್ರೀಯ ನ್ಯೂಸ್ ಏಜೆನ್ಸಿಗಳು ನೀಡಿರುವ ಮತಗಳ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.