Job Description: * ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ದೇಶದ ಗಿಗ್ ಕೆಲಸಗಾರರಿಗೆ ಬ್ರಿಟನ್ ಮಾದರಿಯಲ್ಲಿ ಪಿಂಚಣಿ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ, ಬೇಡಿಕೆ ಆಧರಿಸಿ, ಫ್ರೀಲಾನ್ಸ್ ಮಾದರಿಯಲ್ಲಿ ಕೆಲಸ ಮಾಡುವವರನ್ನು "ಗಿಗ್ ಕಾರ್ಮಿಕರು" ಎಂದು ಹೇಳಲಾಗುತ್ತದೆ. * ಆಹಾರ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ಕ್ಯಾಬ್ ಸೇವೆ ಒದಗಿಸುವ ಕಂಪನಿಗಳ ಜೊತೆ ಕೆಲಸ ಮಾಡುವ ಕೆಲಸಗಾರರು ರಾಷ್ಟೀಯ ಪಿಂಚಣಿ ಯೋಜನೆಯನ್ನು ಪಡೆಯುವಂತೆ ಮಾಡಬೇಕು ಎಂದು ಪಿಎಫ್ ಆರ್ ಡಿಎ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.