Job Description: * ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಕೊನೆಯ ವಿಮಾನ ಡಿಸೇಂಬರ್ 15 ರಂದು ಭಾರತಕ್ಕೆ ಬಂದಿತು. ಭಾರತದ ವಾಯುಪಡೆಯಲ್ಲಿ ಒಟ್ಟಾರೆ 36 ರಫೇಲ್ ಯುದ್ಧ ವಿಮಾನಗಳಿಗಳಿವೆ.* ರಫೇಲ್ ಯುದ್ಧ ವಿಮಾನಗಳ ಬಾಹ್ಯ ಸ್ವರೂಪ : ರಫೇಲ್ ವಿಮಾನದ ರೆಕ್ಕೆಯ ಉದ್ದ 10.8 ಮೀಟರ್ ಉದ್ದ, ರೆಕ್ಕೆಯ ಅಗಲ 45.7 ಮೀಟರ್, ವಿಮಾನದ ತ್ತು ಉದ್ದ 15.30 ಮೀಟರ್, ವಿಮಾನದ ಎತ್ತರ 5.30 ಮೀಟರ್, ವಿಮಾನದ ತೂಕ 18.3 ಟನ್* ರಫೇಲ್ ಯುದ್ಧ ವಿಮಾನಗಳ ಸಾಮರ್ಥ್ಯ : - ಕಾರ್ಯಾಚರಣೆ ನಡೆಸುವ ಸಾಮರ್ಥ್ಯ, ಅಣ್ವಸ್ತ್ರ ಸಿಡಿತಲೆ ಕ್ಷಿಪಣಿಯನ್ನು ಉಡ್ಡಯನ ಮಾಡುವ ಶಕ್ತಿ- ಲೇಸರ್ ವಾರ್ನಿಂಗ್, ರೇಡಾರ್ ಕಾಮಿಲ್ ಹಾಗೂ 1,800 ಕಿ.ಮೀ. ದೂರದವರೆಗೆ ವೈರಿಪಡೆಯನ್ನು ಗ್ರಹಿಸಲು ಶಕ್ತವಾಗಿದೆ.99.5 ಟನ್ ತೂಕದ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲದು, 2,222 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲದು. ಆಗಸದಲ್ಲೇ ಇಂಧನ ತುಂಬಿಸಿಕೊಳ್ಳುವ ಶಕ್ತಿ, ಏಕಕಾಲದಲ್ಲಿ ಶೇ.75ರಷ್ಟು ವಿಮಾನಗಳು ದಾಳಿಗೆ ಸಜ್ಜು - ಆಗಸದಲ್ಲಿ ಹಾರಾಡುತ್ತಲೇ ತೀರಾ ಕೆಳಮಟ್ಟದವರೆಗೆ ನಿಖರವಾಗಿ ದಾಳಿ ಮಾಡಬಲ್ಲ ಹ್ಯಾಮರ್ ಕ್ಷಿಪಣಿ ಇದರಲ್ಲಿದೆ. 300 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.