Job Description: * ಭಾರತವನ್ನು ಸೆಮಿಕಂಡಕ್ಟರ್ ರಾಷ್ಟ್ರವಾಗಿ ಮತ್ತು ಎಲೆಕ್ಟ್ರಾನಿಕ್ಸ್ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಲು ಟೆಕ್ ಕಂಪನಿಗಳು, ನವೋದ್ಯಮಗಳು ಮತ್ತು ಸರ್ಕಾರ ಪಾಲುದಾರರಾಗಲಿವೆ * ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತವು ತಂತ್ರಜ್ಞಾನದ ಗ್ರಾಹಕ ಮತ್ತು ಬ್ಯಾಕ್ ಆಫೀಸ್ ಬೆಂಬಲದಿಂದ ವಿಶ್ವದ ಪ್ರಮುಖ ಟೆಕ್ ಉತ್ಪಾದಕನಾಗುವತ್ತ ದಾಪುಗಾಲಿಡಲು, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಗೆ ಬಂಡವಾಳದ ಬೆಂಬಲವನ್ನು ನೀಡುತ್ತಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ. ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.