Job Description: * ಪ್ರವಾಸೋದ್ಯಮ ಸಚಿವಾಲಯವು ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪರಿಸರ ಪ್ರವಾಸೋದ್ಯಮವನ್ನು ಸೂಕ್ತ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಒಂದು ಎಂದು ಗುರುತಿಸಿದೆ. ಇದರಲ್ಲಿ ಒಡಿಸ್ಸಾ ಸಹ ಸೇರಿದೆ.* ಪ್ರವಾಸೋದ್ಯಮ ಸಚಿವಾಲಯವು ಒಡಿಶಾ ಸೇರಿದಂತೆ ದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. - (i) ಭಾರತದ ಪ್ರವಾಸೋದ್ಯಮ ಸಚಿವಾಲಯವು ಪರಿಸರ ಪ್ರವಾಸೋದ್ಯಮ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರಗಳನ್ನು ರೂಪಿಸಿದೆ. - (ii) ಪ್ರವಾಸೋದ್ಯಮ ಸಚಿವಾಲಯವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಮತ್ತು ಭಾರತೀಯ ಜವಾಬ್ದಾರಿಯುತ ಪ್ರವಾಸೋದ್ಯಮ ಸೊಸೈಟಿ ಯೊಂದಿಗೆ ಪರಸ್ಪರ ಪ್ರವಾಸೋದ್ಯಮ ಕ್ಷೇತ್ರದಲ್ಲಿ 'ಸುಸ್ಥಿರತೆಯ ಉಪಕ್ರಮಗಳನ್ನು' ಸಕ್ರಿಯವಾಗಿ ಉತ್ತೇಜಿಸಲು ಮತ್ತು ಬೆಂಬಲಿಸಲು ಕ್ರಮಗಳನ್ನು ಕೈಗೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ. - (iii) ಭಾರತದ ಸಮಗ್ರ ಸುಸ್ಥಿರ ಪ್ರವಾಸೋದ್ಯಮ ಮಾನದಂಡ ಗಳನ್ನು ಅಭಿವೃದ್ಧಿಪಡಿಸಿದೆ - (iv) ದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯ ಸಾಮರ್ಥ್ಯವನ್ನು ಗುರುತಿಸಿ, ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ ಯೋಜನೆಯಡಿಯಲ್ಲಿ 15 ವಿಷಯಾಧಾರಿತ ಸರ್ಕ್ಯೂಟ್‌ಗಳಲ್ಲಿ "ಇಕೋ ಸರ್ಕ್ಯೂಟ್" ಅನ್ನು ಗುರುತಿಸಿದೆ.