Job Description: ➤ ದೇಶದ ಭೂ ವಿಜ್ಞಾನ, ಹವಾಮಾನ ಮತ್ತು ಸಾಗರ ಸಂಶೋಧನಾ ವಲಯದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಾಗರಶಾಸ್ತ್ರಜ್ಞ (Oceanographer) ಮತ್ತು ಹಿರಿಯ ವಿಜ್ಞಾನಿ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರನ್ನು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ (Ministry of Earth Sciences - MoES) ನೂತನ ಕಾರ್ಯದರ್ಶಿಯಾಗಿ (Secretary) ನೇಮಕ ಮಾಡಲಾಗಿದೆ.➤ ಕೇಂದ್ರ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಇವರ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದ್ದು, ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.➤ ಡಾ. ಶ್ರೀನಿವಾಸ ಕುಮಾರ್ ತುಮ್ಮಲ: ಮೂರು ದಶಕಗಳಿಗೂ ಹೆಚ್ಚು ಕಾಲ ರಿಮೋಟ್ ಸೆನ್ಸಿಂಗ್ ಮತ್ತು ಸಾಗರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು, ಹೈದರಾಬಾದ್‌ನ ‘ಇನ್ಕೊಯಿಸ್’ (INCOIS) ನಿರ್ದೇಶಕರಾಗಿ ಹಾಗೂ ಆಸ್ಟ್ರೇಲಿಯಾದಲ್ಲಿ ಯುನೆಸ್ಕೋದ (UNESCO-IOC) ಹಿಂದೂ ಮಹಾಸಾಗರ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯ ಮುಖ್ಯಸ್ಥರಾಗಿ ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.➤ ಭಾರತದ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯ ಶಿಲ್ಪಿ: 2004ರ ಭೀಕರ ಸುನಾಮಿ ದುರಂತದ ನಂತರ, ಭಾರತದಲ್ಲಿ ಅತ್ಯಾಧುನಿಕ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು (Indian Tsunami Early Warning System) ಸ್ಥಾಪಿಸುವಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಇವರು ಪ್ರಮುಖ ಪಾತ್ರ ವಹಿಸಿದ್ದರು.➤ ಪ್ರಮುಖ ಪ್ರಶಸ್ತಿ ಮತ್ತು ಗೌರವಗಳು: ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ (National Geoscience Award - 2010): ಭಾರತದಲ್ಲಿ ವಿಶ್ವದರ್ಜೆಯ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಕ್ಕಾಗಿ ಕೇಂದ್ರ ಗಣಿ ಸಚಿವಾಲಯ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಇಂಡಿಯನ್ ನ್ಯಾಷನಲ್ ಜಿಯೋಸ್ಪೇಷಿಯಲ್ ಪ್ರಶಸ್ತಿ (Indian National Geospatial Award - 2008): ವಿಪತ್ತು ನಿರ್ವಹಣೆ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆಗೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ. ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ