Job Description: ➤ ಇಲ್ಲಿಯವರೆಗೆ 1971ರ 'ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯಿದೆ'ಯಡಿ ರಾಷ್ಟ್ರಧ್ವಜ, ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆ 'ಜನ ಗಣ ಮನ'ಗೆ ಅಪಮಾನ ಮಾಡುವುದನ್ನು ಮಾತ್ರ ಕಾನೂನಾತ್ಮಕ ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಆದರೆ ನೂತನ 'ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ವಿಧೇಯಕ-2026' ಅಂಗೀಕಾರದೊಂದಿಗೆ, ರಾಷ್ಟ್ರೀಯ ಗೀತೆ (National Song) 'ವಂದೇ ಮಾತರಂ'ಗೂ ಸಹ ರಾಷ್ಟ್ರಗೀತೆಯಷ್ಟೇ (National Anthem) ಕಾನೂನಾತ್ಮಕ ಭದ್ರತೆ ಮತ್ತು ಗೌರವವನ್ನು ನೀಡಲಾಗಿದೆ.➤ ಕಾಯಿದೆಯ ಪ್ರಮುಖ ನಿಬಂಧನೆಗಳು: ಉದ್ದೇಶಪೂರ್ವಕ ಅವಮಾನ ತಡೆ: ವಂದೇ ಮಾತರಂ ಗೀತೆಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಅಸಡ್ಡೆ ತೋರುವುದು ಅಥವಾ ಅದರ ಗಾಯನಕ್ಕೆ ಅಡ್ಡಿಪಡಿಸುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲಾಗಿದೆ. ಕಠಿಣ ಶಿಕ್ಷೆ: ಈ ಅಪರಾಧ ಎಸಗಿದವರಿಗೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ವಿಧೇಯಕದಲ್ಲಿ ಸ್ಪಷ್ಟ ಅವಕಾಶ ಕಲ್ಪಿಸಲಾಗಿದೆ. ➤ 'ವಂದೇ ಮಾತರಂ' ಗೀತೆಯನ್ನು 1870ರ ದಶಕದಲ್ಲಿ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ್ದು, 1882ರ 'ಆನಂದಮಠ' ಕಾದಂಬರಿಯಲ್ಲಿ ಸೇರ್ಪಡೆಗೊಂಡು, 1896ರ ಕೊಲ್ಕತ್ತಾ INC ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರರಿಂದ ಮೊದಲ ಬಾರಿಗೆ ಗಾಯನಗೊಂಡು, 1905ರ ಬಂಗಾಳ ವಿಭಜನೆ ಚಳವಳಿಯ ಪ್ರಮುಖ ಪ್ರೇರಣೆಯಾಗಿ, ಕೊನೆಗೆ 1950 ಜನವರಿ 24 ರಂದು ಭಾರತದ ಅಧಿಕೃತ 'ರಾಷ್ಟ್ರೀಯ ಗೀತೆ'ಯಾಗಿ ಅಂಗೀಕರಿಸಲ್ಪಟ್ಟಿತು.