Job Description: ➤ ಪ್ರತಿ ವರ್ಷದಂತೆ ಈ ಬಾರಿಯೂ ಸೆಪ್ಟೆಂಬರ್ 5 (ಶಿಕ್ಷಕರ ದಿನಾಚರಣೆ) ರಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಶಿಕ್ಷಕರನ್ನು ಗೌರವಿಸಲು ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನು ಘೋಷಿಸಿದೆ. ಒಟ್ಟು ಪ್ರಶಸ್ತಿ ಪುರಸ್ಕೃತರು: 48 ಶಾಲಾ ಶಿಕ್ಷಕರು. ಲಿಂಗಾನುಪಾತ: 26 ಪುರುಷ ಶಿಕ್ಷಕರು ಮತ್ತು 22 ಮಹಿಳಾ ಶಿಕ್ಷಕಿಯರು. ಪ್ರತಿನಿಧಿತ್ವ: 27 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಅಡಿಯಿರುವ 6 ಸಂಸ್ಥೆಗಳಿಂದ ಶಿಕ್ಷಕರ ಆಯ್ಕೆ ನಡೆದಿದೆ. ಸ್ಥಳ: ವಿಜ್ಞಾನ ಭವನ, ನವದೆಹಲಿ. ➤ ಆಯ್ಕೆ ಪ್ರಕ್ರಿಯೆ: ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education & Literacy) ಕಠಿಣ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದೆ. ಜಿಲ್ಲಾ ಮಟ್ಟ (District Level) ರಾಜ್ಯ ಮಟ್ಟ (State Level) ರಾಷ್ಟ್ರೀಯ ಮಟ್ಟ (National Level / Independent National Jury) ಮೂರು ಹಂತಗಳ ಆನ್‌ಲೈನ್ ಸ್ವಯಂ-ನಾಮನಿರ್ದೇಶನ ಹಾಗೂ ವಿಮರ್ಶೆಯ ಮೂಲಕ ಶಿಕ್ಷಣದಲ್ಲಿ ವಿನೂತನ ಪ್ರಯೋಗ ಮಾಡಿದ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಗುರುತಿಸಲಾಗಿದೆ. ➤ ಪ್ರಶಸ್ತಿ ಸಮಾರಂಭದ ವಿಶೇಷತೆಗಳು: ಸೆಪ್ಟೆಂಬರ್ 5ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರ ಸಾಧನೆಗಳು, ಅವರ ವಿನೂತನ ಬೋಧನಾ ಪದ್ಧತಿಗಳು ಮತ್ತು ಶ್ಲಾಘನೀಯ ಕಾರ್ಯಗಳನ್ನು ಬಿಂಬಿಸುವ ಕಿರು ಸಾಕ್ಷ್ಯಚಿತ್ರಗಳನ್ನು (Short Documentaries) ಪ್ರದರ್ಶಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ದೂರದರ್ಶನ (Doordarshan), ಸ್ವಯಂ ಪ್ರಭಾ (SWAYAM PRABHA) ಚಾನೆಲ್‌ಗಳು ಹಾಗೂ ಶಿಕ್ಷಣ ಸಚಿವಾಲಯದ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ (Live Telecast) ಮಾಡಲಾಗುತ್ತದೆ. KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ