Job Description: ➤ ದಾನ್‌ವೀರ್ ಪ್ಲಾಟ್‌ಫಾರ್ಮ್: ಗ್ರಾಮೀಣ ಪಂಚಾಯತ್‌ಗಳ ಡಿಜಿಟಲ್ ಮೂಲಸೌಕರ್ಯ ಬಲಪಡಿಸಲು ಮತ್ತು ಕಂಪ್ಯೂಟರ್ ಉಪಕರಣಗಳ ದೇಣಿಗೆಗೆ ಅನುವು ಮಾಡಿಕೊಡಲು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 'ಮೇರಿ ಪಂಚಾಯತ್' ಆಪ್ ಮೂಲಕ 'ದಾನ್‌ವೀರ್' ನಾಗರಿಕ ಸಹಭಾಗಿತ್ವ ವೇದಿಕೆಯನ್ನು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದೆ.➤ ಕೋಸಿ-ಮೇಚಿ ನದಿ ಜೋಡಣೆ ಯೋಜನೆ: ಬಿಹಾರದಲ್ಲಿ ಪ್ರವಾಹ ನಿಯಂತ್ರಣ ಹಾಗೂ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ಕೇಂದ್ರ ಸರ್ಕಾರವು ₹6,000 ಕೋಟಿಗೂ ಹೆಚ್ಚಿನ ವೆಚ್ಚದ 'ಕೋಸಿ-ಮೇಚಿ' ಒಳನಾಡು ನದಿ ಜೋಡಣೆ ಯೋಜನೆಗೆ ಅನುಮೋದನೆ ನೀಡಿದ್ದು, ಮಾರ್ಚ್ 2029 ರೊಳಗೆ ಪೂರ್ಣಗೊಳಿಸುವ ಗಡುವು ನಿಗದಿಪಡಿಸಿದೆ.➤ ಸೈಬರ್ ವಂಚನೆ ತಡೆಗೆ 'ಇ-ಜೀರೋ ಎಫ್‌ಐಆರ್': ಸೈಬರ್ ಹಣಕಾಸು ವಂಚನೆಗೊಳಗಾದ ಸಂತ್ರಸ್ತರು ಮನೆಯಲ್ಲೇ ಕುಳಿತು '1930' ಸಹಾಯವಾಣಿ ಮೂಲಕ ಸುಲಭವಾಗಿ ದೂರು ದಾಖಲಿಸಲು ಗುಜರಾತ್ ಸರ್ಕಾರವು ಗಾಂಧಿನಗರದಲ್ಲಿ ಅತ್ಯಾಧುನಿಕ 'ಸೈಬರ್ ಫೈನಾನ್ಶಿಯಲ್ ಫ್ರಾಡ್ ಇ-ಜೀರೋ ಎಫ್‌ಐಆರ್' ವ್ಯವಸ್ಥೆಯನ್ನು ಜಾರಿಗೆ ತಂದಿದೆ.➤ ದಕ್ಷಿಣ ಆಫ್ರಿಕಾ ETA ವ್ಯವಸ್ಥೆ: ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳು ವೀಸಾ ಕೇಂದ್ರಗಳಿಗೆ ತೆರಳದೆ ಆನ್‌ಲೈನ್‌ನಲ್ಲೇ 90 ದಿನಗಳ ಅಲ್ಪಾವಧಿ ಡಿಜಿಟಲ್ ವೀಸಾ ಪಡೆಯಲು ದಕ್ಷಿಣ ಆಫ್ರಿಕಾ ಸರ್ಕಾರವು 'ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ (ETA)' ವ್ಯವಸ್ಥೆಯನ್ನು ಪರಿಚಯಿಸಿದೆ.➤ ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆ: ಕರ್ನಾಟಕ ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯು ರೈತರು ತಮ್ಮ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಪ್ರೋತ್ಸಾಹಿಸುವ 'ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆ'ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.➤ ವೆಬ್ ಸೀರೀಸ್ 'ಆಪರೇಷನ್ ಸಫೇದ್ ಸಾಗರ್': 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಸೇನೆಯ 'ಗೋಲ್ಡನ್ ಆರೋಸ್' ಸ್ಕ್ವಾಡ್ರನ್ ಹಾಗೂ ವೀರಮರಣ ಹೊಂದಿದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಅವರ ಸಾಹಸಗಾಥೆಯನ್ನು ಬಿಂಬಿಸುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್ ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ.➤ ಅಳಿವಿನಂಚಿನಲ್ಲಿ ಮಾಲ್ವಿ ಒಂಟಿ ತಳಿ: ಭಾರತದ 9 ಅಧಿಕೃತ ಒಂಟಿ ತಳಿಗಳಲ್ಲಿ ಒಂದಾದ ಹಾಗೂ ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿ ಕಂಡುಬರುವ ಬಿಳಿ ಬಣ್ಣದ ಸಣ್ಣ ಗಾತ್ರದ 'ಮಾಲ್ವಿ ಒಂಟೆ' ತಳಿಯ ಸಂಖ್ಯೆ ತೀವ್ರವಾಗಿ ಕುಸಿದಿದ್ದು, ಇದನ್ನು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ