Job Description: * ಭಾರತ ಮಹಿಳಾ ಕ್ರಕೆಟ್ ತಂಡದ ಹೆಮ್ಮೆಯ ಕ್ರೀಡಾ ಪಟು ರಾಜೇಶ್ವರಿ ಗಾಯಕವಾಡ ಅವರಿಗೆ ರಾಜಸ್ಥಾನದ ರಾಜ್ಯದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಗೌರವ ಡಾಕ್ಷರೇಟ್ ನೀಡಿ ಗೌರವಿಸಿದೆ. * ಇದೇ ಮೊದಲ ಸಲ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಡಾಕ್ಟರೇಟ್ ದೊರೆತಿದ್ದು ಹೆಮ್ಮೆಯ ವಿಚಾರವಾಗಿದೆ.* ಇದೇ ಮೊದಲ ಬಾರಿಗೆ " ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರಿಗೆ ಈ ಗೌರವ ಡಾಕ್ಟರೇಟ್ ದೊರೆತಿದೆ. ನ.9 ರಂದು ಉದಯಪುರ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜೇಶ್ವರಿ ಗಾಯಕವಾಡ ಅವರಿಗೆ ಎಸ್.ಪಿ.ಎಸ್.ಯು ಅಧ್ಯಕ್ಷರಾದ ಡಾ.ಪದ್ಮಕಲಿ ಬ್ಯಾನರ್ಜಿ ಹಾಗೂ ಡಾ.ನಿಧಿಪತಿ ಸಿಂಗಾನಿಯಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.