Job Description: * ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಬೆಂಗಳೂರಿನ ಮಹೇಶ್‌ ಕಾಕಡೆ ಮತ್ತು ಮಾನವಿಕ ಕ್ಷೇತ್ರದಲ್ಲಿ ಪ್ರೊ.ಸುಧೀರ್‌ ಕೃಷ್ಣಸ್ವಾಮಿ ಸೇರಿ ಆರು ಜನರು ಇಸ್ಫೋಸಿಸ್‌ ಸೈನ್ಸ್‌ ಫೌಂಡೇಶನ್ ಕೊಡ ಮಾಡುವ ಪ್ರತಿಷ್ಠಿತ ‘2022ರ ಇಸ್ಫೋಸಿಸ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. * ಇಸ್ಫೋಸಿಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ಫೌಂಡೇಶನ್ ಟ್ರಸ್ಟಿಗಳು ಮಂಗಳವಾರ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದರು.* ‘ಎಂಜಿನಿಯರಿಂಗ್‌ ಕಂಪ್ಯೂಟರ್‌ ಸೈನ್ಸ್‌’ನಲ್ಲಿ ಐಐಟಿ ಖರಗಪುರದ ಸುಮನ್‌ ಚಕ್ರವರ್ತಿ, ‘ಜೀವ ವಿಜ್ಞಾನ’ ಕ್ಷೇತ್ರದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ ಸಂಸ್ಥೆಯ ನರಜೈವಿಕ ಶಾಸ್ತ್ರಜ್ಞೆ ವಿದಿತಾ ವೈದ್ಯ ಆಯ್ಕೆಯಾಗಿದ್ದಾರೆ.* ‘ಭೌತ ವಿಜ್ಞಾನ’ ವಿಭಾಗದಲ್ಲಿ ಪುಣೆ ನ್ಯಾಷನಲ್‌ ಸೆಂಟರ್‌ ಫಾರ್‌ ರೇಡಿಯೋ ಅಸ್ಟೊ್ರೕನಾಮಿ ವಿಭಾಗದ ನಿಸ್ಸೀಮ್‌ ಕಾನೇಕರ್‌, ‘ಸಮಾಜ ವಿಜ್ಞಾನ’ ವಿಭಾಗದಲ್ಲಿ ಅಮೆರಿಕದ ಯೇಲ್‌ ಯುನಿವರ್ಸಿಟಿಯ ರೋಹಿಣಿ ಪಾಂಡೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಪುರಸ್ಕಾರವು 1 ಲಕ್ಷ ಡಾಲರ್‌, ಚಿನ್ನದ ಪದಕ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಜನವರಿ ಮಾಸಾಂತ್ಯದಲ್ಲಿ ನಗರದ ಲೀಲಾವತಿ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿಗಳು ತಿಳಿಸಿದರು.* ಮಹೇಶ್‌ ಕಾಕಡೆ ಅವರು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು, ಬೀಜಗಣಿತ ಸಂಖ್ಯಾಸೂತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ನೀಡಿರುವ ಸೂತ್ರ ಗೂಢಲಿಪಿ ಶಾಸ್ತ್ರದಲ್ಲಿ ಹೆಚ್ಚಿನ ಬಳಕೆ ಆಗುತ್ತಿದೆ.* ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ ಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿ ಅವರಿಗೆ 1973 ರಲ್ಲಿ ಸುಪ್ರೀಂ ಕೋರ್ಟ ರೂಪಿಸಿದ ‘ಸಂವಿಧಾನದ ಮೂಲಸ್ವರೂಪ’ ತಾತ್ವಿಕತೆ ಕುರಿತ ಬರವಣಿಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.* ಈ ಬಾರಿ ಒಟ್ಟೂ 218 ಅರ್ಜಿಗಳು ಪ್ರಶಸ್ತಿಗಾಗಿ ಬಂದಿದ್ದವು. ತೀರ್ಪುಗಾರರಾದ ಪ್ರೊ. ಅರವಿಂದ್‌, ಪ್ರೊ. ಅಕೀಲ್‌ ಬಿಲಗ್ರಾಮಿ, ಪ್ರೊ. ಮೃಗಾಂಕಾ ಸುರ್‌, ಪ್ರೊ. ಚಂದ್ರಶೇಖರ ಖರೆ, ಪ್ರೊ.ಶ್ರೀನಿವಾಸ್‌ ಕುಲಕರ್ಣಿ, ಪ್ರೊ. ಕೌಶಿಕ್‌ ಬಸು ಅವರು ವಿಜೇತರನ್ನು ಆಯ್ಕೆ ಮಾಡಿದ್ದಾರೆ.* ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೊರಜಗತ್ತು ಎದುರಿಸುವ ಸಮಸ್ಯೆಗಳನ್ನು ಬೇರುಮಟ್ಟದಲ್ಲಿ ಅರ್ಥೈಸಬೇಕಾಗಿದೆ ಎಂದು ಇಸ್ಫೋಸಿಸ್‌ ಸೈನ್ಸ್‌ ಫೌಂಡೇಶನ್ ಟ್ರಸ್ಟಿ ನಾರಾಯಣ್‌ ಮೂರ್ತಿ ಹೇಳಿದರು.* ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂಶೋಧನಾ ಕ್ಷೇತ್ರ ಹೆಚ್ಚು ಪ್ರಗತಿ ಸಾಧಿಸುತ್ತಿದೆ. ಕೋವಿಡ್‌ ವ್ಯಾಕ್ಸಿನ್‌ ಕಂಡುಹಿಡಿಯುವಿಕೆ ಸಾಧನೆಯಾಗಿದೆ.