Job Description: * ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. * ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿದ್ದ ಕೃಷ್ಣ ನವೆಂಬರ್ 15 ರಂದು ಕೊನೆಯುಸಿರೆಳೆದಿದ್ದಾರೆ.* ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೃಷ್ಣ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತು. 79 ವರ್ಷ ವಯಸ್ಸಿನ ಕೃಷ್ಣ ಅವರ ನಿಧನ ತೆಲುಗು ಚಿತ್ರರಂಕ್ಕೆ ಶಾಕ್ ಕೊಟ್ಟಿದೆ.* ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಬಿರುದಿನಿಂದ ಕರೆಸಿಕೊಂಡ ಮೊದಲ ನಟ ಕೃಷ್ಣ. 2009 ರಲ್ಲಿ ಕೃಷ್ಣ ಅವರಿಗೆ ಪದ್ಮಭೂಷಣ ಗೌರವ ನೀಡಲಾಗಿತ್ತು.* 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣ 16 ಚಿತ್ರಗಳ ನಿರ್ದೇಶಕರೂ ಹೌದು. ಕೌಬಾಯ್ ಸ್ಟೈಲ್ ಹಾಗೂ ಗೂಢಚಾರಿಕೆ ಚಿತ್ರಗಳ ಮೂಲಕ ಪ್ರಸಿದ್ಧಿಗೆ ಬಂದ ಕೃಷ್ಣರನ್ನು ತೆಲುಗರು ಬಾಂಡ್ ಕೃಷ್ಣ ಎಂದೇ ಕರೆಯುತ್ತಿದ್ದರು.* ಅಲ್ಲರಿ ಸೀತಾರಾಮರಾಜು ಪಾತ್ರದಲ್ಲಿ ಅಪಾರವಾಗಿ ಮೆಚ್ಚಿಕೊಂಡಿದ್ದರಷ್ಟೇ ಅಲ್ಲ, ಆರಾಧಿಸುತ್ತಿದ್ದರು. ವಿಜಯ್ ನಿರ್ಮಲಾ ಇವರ ಪತ್ನಿ. ಇವರೊಂದಿಗೆ 47 ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದ ಕೃಷ್ಣ, ಜಯಪ್ರದಾ ಅವರೊಂದಿಗೆ 48 ಚಿತ್ರಗಳಲ್ಲಿ ನಟಿಸಿದ್ದರು.