Job Description: * ಭಾರತ ಸರ್ಕಾರ ವಾಣಿಜ್ಯ ಮತ್ತು ಆಂತರಿಕ ವಾಣಿಜ್ಯ ಪ್ರವರ್ತನೆ ಇಲಾಖೆ (ಡಿಪಿಐಐಟಿ ) ಯಿಂದ ಇಂಟರ್ನ್ ಶಿಪ್ ಹಮ್ಮಿಕೊಳ್ಳಲಾಗಿದೆ. * ಡಿಪಿಐಐಟಿ ಯಾ ಉದ್ದೇಶ- ಸಂಶೋಧನಾ ಸ್ಕಾಲರ್ ಗಳು, ಸ್ನಾತಕ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವದಾಗಿದೆ.ಇಲ್ಲಿ ಭಾರತ ಸರ್ಕಾರದ ಕೆಲಸದ ಸಂಸ್ಕೃತಿ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. * ಇಂಟರ್ನ ಶಿಪ್ ನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು , ಇಂಜಿನಿಯರಿಂಗ್, ಮ್ಯಾನೇಜುಮೆಂಟ್, ಕಾನೂನು, ಆರ್ಥಿಕತೆ, ಎಕನಾಮಿಕ್ಸ್, ಕಂಪ್ಯೂಟರ್ ಮತ್ತು ಲೈಬ್ರರಿ ಮ್ಯಾನೇಜ್ ಮೆಂಟ್ ನಲ್ಲಿ ಸಂಶೋಧನೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. * ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.