Job Description: * 2021 - 2022 ರಲ್ಲಿ "ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ"(ಯುಎನ್ ಡಿಪಿ)ಯು ಇತ್ತೀಚಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಪ್ರಕಟಿಸಿದೆ. * 191 ದೇಶಗಳನ್ನೊಳಗೊಂಡಂತೆ ಭಾರತವು 132 ನೇ ಸ್ಥಾನ ಪಡೆದುಕೊಂಡಿದೆ. * 2021 ರಲ್ಲಿ 131 ನೇ ರ್ಯಾಂಕ್ ಪಡೆದುಕೊಂಡಿತ್ತು. * ಭಾರತ ದ ಎಚ್ ಡಿ ಐ ಮೌಲ್ಯ 2021 ರಲ್ಲಿ0.633 ಇದ್ದು, ಜಾಗತಿಕ ಮೌಲ್ಯ(0.732)ಕ್ಕಿಂತ ಕಡಿಮೆಯಾಗಿದೆ. * ಅದೇ ರೀತಿ 2020 ರಲ್ಲಿ 0.642 ಇತ್ತು. * ಭಾರತದ ರಾಷ್ಟೀಯ ತಲಾ ಆದಾಯ( ಜಿಎನ್ಐ)-2017 ಪಿಪಿಪಿ 6590 ಡಾಲರ್ ಆಗಿದೆ. ಭಾರತದ ಎಚ್ ಡಿಐ 2018 ರಲ್ಲಿ 0.645 ರಿಂದ 2021 ರಲ್ಲಿ 0 . 633 ಕ್ಕೆ ಇಳಿದಿರುವದರಿಂದ ಜೀವಿತಾವಧಿ ಕುಸಿದಿದೆ. * ಎಚ್ ಡಿ ಐ ವರದಿಯ ವಿಶ್ವಸಂಸ್ಥೆಯ 5 ಅಗ್ರ ರಾಷ್ಟ್ರಗಳು ಸ್ವಿಡ್ಜರ್ಲ್ಯಾಂಡ್, ನಾರ್ವೆ, ಐಸಲ್ಯಾಂಡ್, ಹಾಂಕಾಂಗ್ ಮತ್ತು ಆಸ್ಟ್ರೇಲಿಯಾ ಆಗಿವೆ.ಹಾಗೂ ಭಾರತದ ನೆರೆಹರೆಯ ರಾಷ್ಟ್ರಗಳು ಪಡೆದಿರುವ ಎಚ್ ಡಿ ಐ ರ್ಯಾಂಕ್ ಗಳು ಹೀಗಿವೆ - ಶ್ರೀಲಂಕಾ 73 - ಚೀನಾ 79 - ಭೂತಾನ್ 127 - ಬಾಂಗ್ಲಾದೇಶ 129 - ನೇಪಾಳ 143 - ಪಾಕಿಸ್ತಾನ 161 * ಭಾರತದಲ್ಲಿ ನಿರೀಕ್ಷಿತ ಶಾಲಾವಧಿ11.9 ವರ್ಷವಾಗಿದ್ದು, ಸರಾಸರಿ ಶಾಲಾ ಅವಧಿ 6.7 ವರ್ಷವಾಗಿದೆ.