Job Description: * ಭಾರತ್ ಮೊದಲ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ 19 ಸೋಂಕಿನಿಂದ ರಕ್ಷಣೆಗೆ ಮೂಗಿನ ಮೂಲಕ ನೀಡಲಾಗುವ ಲಸಿಕೆಗೆ ಅನುಮೋದನೆ ದೊರಕಿದೆ.*ತುರ್ತು ಸನ್ನಿವೇಶಗಳಲ್ಲಿ ಈ ಮೂಗಿನ ಮೂಲಕ ನೀಡುವ ಲಸಿಕೆ ವಯಸ್ಕರಿಗೆ ನಿರ್ಬಂಧಿತ ಬಳಕೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು * ಈ ಹೊಸ 'BBV154' ಇಂಟ್ರಾನಾಸಲ್ ಲಸಿಕೆಯನ್ನು ವಿತರಣೆಯನ್ನು ಕಡಿಮೆ ಮತ್ತು ಮಧ್ಯಮ ಆದಾಯ ಪಡೆಯುವ ನಾಗರಿಕರು ವಾಸಿಸುವ ದೇಶಗಳಲ್ಲಿ ಬಳಕೆಗೆ ಯೋಗ್ಯವಾಗಿ ತಯಾರಿಸಲಾಗಿದೆ* ಭಾರತ್ ಬಯೋಟೆಕ್ ಇಂಟ್ರಾನಾಸಲ್ ಕೋವಿಡ್ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. * ಕೋವಿಡ್‌-19 ವೈರಸ್‌ ಹೊಸ ಹೊಸ ರೂಪಾಂತರ ಪಡೆಯುತ್ತಿದೆ. ಓಮಿಕ್ರಾನ್ ಪ್ರಬಲ ವೈರಸ್‌ ಆಗಿ ನಮ್ಮನ್ನೆಲ್ಲ ಕಾಡುತ್ತಿದೆ. ಆಸ್ಪತ್ರೆಗೆ ದಾಖಲಾದ 90% ಜನರು ಈ ಓಮ್ರಿಕಾನ್‌ ವೈರಸ್‌ನ ರೋಗಲಕ್ಷಣಗಳನ್ನು ಹೊಂದಿದ್ದಾರೆ.* ಭಾರತ್ ಬಯೋಟೆಕ್ ಸಂಸ್ಥೆಯು ಮೂಗಿನ ಮೂಲಕ ನೀಡುವ ಲಸಿಕೆಯನ್ನು 4 ಸಾವಿರ ಜನರ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿದೆ.* ಭಾರತ್ ಬಯೋಟೆಕ್‌ನ ChAd36-SARS-CoV-S COVID-19 ಮೂಗಿನ ಲಸಿಕೆಯನ್ನು ದೇಶದ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಲಭ್ಯವಾಗಲಿದೆ.