Job Description: * ' ನಿಸರ್ಗಪ್ರಿಯ' ಕಾವ್ಯನಾಮದಿಂದ ಹೆಸರಾಗಿದ್ದ ಸಾಹಿತಿ ಕಂಬಾಳು ಸಿದ್ಧಗಂಗಯ್ಯ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದರು.* ಕಂಬಾಳು ರವರು ಕಾದಂಬರಿ , ಸಂಶೋಧನೆ, ನಾಟಕ, ಮಹಾಕಾವ್ಯ, ಜನಪದ ಗ್ರಂಥ ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದರು.* ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ಕಂಬಾಳು ಗ್ರಾಮದಲ್ಲಿ ಜನಿಸಿದರು.* ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಇವರು ಗುಜ ಎಂಬ ಕಂಪನಿಯ ನಾಟಕಗಳಲ್ಲಿ ಕೆಲ ವರ್ಷ ಅಭಿನಯಿಸಿದ್ದರು.* ಇವರ ಸ್ವರ್ಗಸ್ಥ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿತ್ತು.* ಬೆನಕನಕೆರೆ , ಯಶೋಧರ , ತಿರುಕರಾಜ , ವ್ಯವಸ್ಥೆ ರುದ್ರ ಚೋರಪುರಾಣ ಮುಂತಾದ ಕೃತಿಗಳನ್ನು ರಚಿಸಿದ್ದರು.* ' ಸಿರಿಗಂಧ ' ಎಂಬ ಜಾನಪದ ಚಿತ್ರಮಾಲಿಕೆಗೆ ಸಂಶೋಧನಾ ಸಾಹಿತ್ಯವನ್ನು ಪ್ರಶಸ್ತಿ ಲಭಿಸಿದೆ.